Slide
Slide
Slide
previous arrow
next arrow

ಲೋಟದಲ್ಲೇ ವಾದ್ಯ ನುಡಿಸುವ ಬಾಲಕ ಗೋಕರ್ಣದ ವಿಘ್ನೇಶ್ ಖೂರ್ಸೆ

300x250 AD

ಕುಮಟಾ: ಮ್ಯೂಸಿಕಲ್ ಇನ್ಸ್ಟ್ರುಮೆಂಟ್’ನಿಂದ ವಿಭಿನ್ನ ಮ್ಯೂಸಿಕ್ ನುಡಿಸೋದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಾಲಕ ಅಡುಗೆ ಮನೆಯಲ್ಲಿ ಸಿಗುವ ಲೋಟವನ್ನೆ ಬಳಸಿಕೊಂಡು ವಾದ್ಯವನ್ನು ಸಿದ್ಧಪಡಿಸಿಕೊಂಡು ಇಂಪಾಗಿ ಮ್ಯೂಸಿಕ್ ನುಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಲೋಹ ತರಂಗದ ಮೇಲೆ ಅಪಾರ ಆಸಕ್ತಿ ಇರುವ ಈತ ಗೋಕರ್ಣದ ವಿಘ್ನೇಶ್ ಖೂರ್ಸೆ. ಈತನು ಒಂದನೇ ಕ್ಲಾಸ್ ಇರಬೇಕಾದ್ರೆ ಸಂಗೀತಗಾರ ಇವರ ತಂದೆ ಗಣಪತಿ ಖೂರ್ಸೆಯವರಿಂದ ಜಲತರಂಗ ಅಭ್ಯಸಿಸುತ್ತಿದ್ದ. ಇವರು ಕೊನೆಗೆ ರಾಜು ಹೆಗಡೆ ಹೆಗ್ಗಾರ್ ಅವರು ಕಂಡು ಹಿಡಿದ ಈ ವಿಶೇಷ ಲೋಹ ತರಂಗದ ಬಗ್ಗೆ ಆಸಕ್ತಿ ಹೊಂದಿದರು. ಅವರ ತಂದೆಯ ಆಸಕ್ತಿಯೂ ಜೊತೆ ಸೇರಿ ಗೋಕರ್ಣ ಪೇಟೆಯ ಸ್ಟೀಲ್ ಅಂಗಡಿಗಳಿಗೆ ಹೊಕ್ಕು ಪಿಚ್ ಲ್ಯಾಬ್ ಸಾಫ್ಟ್ ವೇರ್ ನೊಂದಿಗೆ ಪ್ರತಿ ಲೋಟವೂ ಹೊರಡಿಸುವ ಶಬ್ದ ತರಂಗವನ್ನು ಸ್ವರರೂಪದಲ್ಲಿ ತರಲು ಒಂದು ವರ್ಷದ ತನಕ ಎಲ್ಲಾ ರೀತಿಯ ಲೋಟಗಳನ್ನು ಪರೀಕ್ಷಿಸಿ ಈ ಮಾದರಿಯನ್ನು ಸಿದ್ಧಪಡಿಸಿದರು. ಈಗ ಇವರು ಯಾವ ಹಾಡನ್ನಾದರೂ ಈ ವಾದ್ಯದಲ್ಲಿ ನುಡಿಸಬಲ್ಲರು. ಇಲ್ಲಿಯ ತನಕ ರಾಜ್ಯದಲ್ಲಿ ಲೋಹ ತರಂಗ ನಿಪುಣರಲ್ಲಿ ಇವರಿಬ್ಬರೇ ಮೊದಲಿಗರು ಎಂದರೆ ತಪ್ಪಾಗಲಾರದು.
ಎಂಟು ವರ್ಷದ ತನಕ ವಿಘ್ನೇಶ್ ಕೂರ್ಸೆ ಈ ವಾದ್ಯದ ಅಭ್ಯಾಸ ಮಾಡಿದ್ದಾರೆ. ಈಗ ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ. ಅವರ ತಂದೆ ಪೌರೋಹಿತ್ಯ ಮಾಡುತ್ತಿದ್ದಾರೆ. ಅದರೊಡನೆ ಈ ಪ್ರವೃತ್ತಿಯನ್ನು ಅಳವಡಿಸಿಕೊಂಡು ಮುಂದುವರೆಯುತ್ತಿದ್ದಾರೆ. ಈಗಾಗಲೇ ವಿಘ್ನೇಶ್ ಅವರಿಗೆ ಹವ್ಯಕ ಪಲ್ಲವ, ಸ್ವರ ಶ್ರೀ ಪ್ರಶಸ್ತಿ ಸಂದಿವೆ. ವಿಶ್ವಶಾಂತಿ ಪ್ರತಿಷ್ಠಾನದಿಂದ ನಮ್ಮನೆ ಯುವ ಪುರಸ್ಕಾರ ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಎರಡು ಬ್ರಶ್ ಹಾಗೂ ಲೋಟದಿಂದ ಇಂಪಾದ ಸಂಗೀತ ಹೊರಡಿಸುವ ಇವರ ಸ್ವರ ಜ್ಞಾನಕ್ಕೆ ನಮ್ಮದೊಂದು ಸಲಾಮ್.

300x250 AD
Share This
300x250 AD
300x250 AD
300x250 AD
Back to top