ದಾಂಡೇಲಿ: ನಗರದ ಬಜರಂಗ ದಳವ ವತಿಯಿಂದ ಕಳೆದ 8 ವರ್ಷಗಳಿಂದ ಸತತ ಹಮನು ಮಾಲಾಧಾರಣೆ ನಡೆಯುತ್ತಿದ್ದು, ಈ ಬಾರಿಯೂ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಹನುಮ ಮಾಲಾಧಾರಿಗಳಾಗಿ ವೃತಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರತಿದಿನ ಬೆಳ್ಳಂ ಬೆಳಗ್ಗೆ ಮತ್ತು ಸಂಜೆ ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀ.ಮಾರುತಿ ಮಂದಿರದಲ್ಲಿ ಸಾಮೂಹಿಕ ಭಜನೆ ಹಾಗೂ ವಿವಿಧ ವೃತಾಚರಣೆಗಳೊಂದಿಗೆ ಪೂಜಾ ಕರ್ಯದಲ್ಲಿ ಹನುಮ ಮಾಲಾಧಾರಿಗಳು ಭಾಗವಹಿಸುತ್ತಿದ್ದಾರೆ. ಮಾಲಾದೀಕ್ಷೆಯನ್ನು ಪಡೆದು ವೃತನಿಯಮಗಳನ್ನು ಪಾಲಿಸಿ, ಬಳಿಕ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತಕ್ಕೆ ಹೋಗಿ ಅಲ್ಲಿ ಹನುಮನ ದರ್ಶನವನ್ನು ಪಡೆದು ಮಾಲೆಯನ್ನು ವಿಸರ್ಜಿಸಿ ಬರಲಾಗುತ್ತಿದೆ. ಕಳೆದ ವರ್ಷವೂ ಒಟ್ಟು 107 ಹನುಮ ಮಾಲಾಧಾರಿಗಳು ಅಂಜನಾದ್ರಿ ಪರ್ವತಕ್ಕೆ ಯಾತ್ರೆಯನ್ನು ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ವರ್ಷ ಈ ಸಂಖ್ಯೆಯನ್ನು ಮೀರಿ ಹನುಮ ಮಾಲಾಧಾರಿಗಳು ಯಾತ್ರೆ ಕೈಗೊಳ್ಳುವ ಸಾಧ್ಯತೆಯಿದೆ.
ಇದೇ ಡಿ:05 ರಂದು ಈ ಎಲ್ಲಾ ಹನುಮ ಮಾಲಾಧಾರಿಗಳು ಅಂಜನಾದ್ರಿ ಪರ್ವತಕ್ಕೆ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಬಜರಂಗ ದಳದ ಪ್ರಮುಖರಾದ ಚಂದ್ರು ಮಾಳಿ, ನಾಗರಾಜ ಅನಂತಪುರ, ವಿನಯ್ ದಳವಾಯಿ, ಲಿಂಗಯ್ಯಾ ಪೂಜಾರ, ರಾಜೇಶ್ ಗಿರಿ, ಮಂಜು ರಾಮಸ್ವಾಮಿ, ಲಾಲ್ ಸಿಂಗ್, ರವಿ ಚೌವ್ಹಾನ್ ಅವರ ನೇತೃತ್ವದಲ್ಲಿ ಹನುಮಾ ಮಾಲಾಧಾರಣೆ ಮತ್ತು ಇದಕ್ಕೆ ಸಂಬ0ಧಿಸಿದ ಎಲ್ಲ ಕಾರ್ಯಚಟುವಟಿಕೆಗಳು ನಡೆಯುತ್ತಿದೆ.