• Slide
  Slide
  Slide
  previous arrow
  next arrow
 • ಗಣೇಶ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ

  300x250 AD

  ದಾಂಡೇಲಿ: ನಗರದ ಗಣೇಶ ನಗರದಲ್ಲಿ ವೋಲ್ವೊ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯು ಗುರುವಾರ ಜರುಗಿತು.
  ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ವೋಲ್ವೊ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸಿ.ಎಸ್.ಆರ್ ವಿಭಾಗದ ನಿರ್ದೇಶಕರಾದ ಜಿ.ವಿ.ರಾವ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಶಾಸಕರಾದ ಆರ್.ವಿ.ದೇಶಪಾಂಡೆಯವರ ವಿನಂತಿಯ ಮೇರೆಗೆ ವೋಲ್ವೊ ಸಂಸ್ಥೆಯಿ0ದ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜನರಿಗೆ ಈ ನೀರಿನ ಘಟಕ ಸಹಕಾರಿಯಾಗಲಿ. ಈ ಘಟಕವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಲು ನಗರ ಸಭೆಯ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಕರೆ ನೀಡಿದರು.
  ಈ ಸಂದರ್ಭದಲ್ಲಿ ಮಾತನಾಡಿದ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವೋಲ್ವೊ ಕಂಪೆನಿಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿರುವುದಕ್ಕೆ ನಗರಾಡಳಿತದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿ, ಇದಕ್ಕೆ ಆರ್.ವಿ.ದೇಶಪಾಂಡೆಯವರ ಪ್ರಯತ್ನವನ್ನು ಸ್ಮರಿಸಿಕೊಂಡರು.
  ಸ್ಥಳೀಯ ನಗರ ಸಬಾ ಸದಸ್ಯರಾದ ನಂದೀಶ್ ಮುಂಗರವಾಡಿಯವರು ಮಾತನಾಡಿ ನಮ್ಮ ಹಾಗೂ ನಮ್ಮ ವಾರ್ಡಿನ ಜನತೆಯ ಮನವಿಗೆ ಸಕಾಲಿಕವಾಗಿ ಸ್ಪಂದಿಸಿ ವೋಲ್ವೋ ಕಂಪೆನಿಯವರಿ0ದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣವಾಗುವಂತೆ ಮಾಡಿದ ಸಾಸಕರಾದ ಆರ್.ವಿ.ದೇಶಪಾಂಡೆಯವರಿಗೆ ಮತ್ತು ಅತ್ಯುತ್ತಮವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಕೊಟ್ಟ ವೋಲ್ವೊ ಕಂಪೆನಿಯವರಿಗೆ ವಾರ್ಡಿನ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
  ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಾತನಾಡಿ ನೂತನ ಶುಧ್ಧ ಕುಡಿಯುವ ನೀರಿನ ಘಟಕ ಈ ಭಾಗದ ಜನರಿಗೆ ಸಹಕಾರಿಯಾಗಲೆಂದರು.
  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಸಪೂರ ಯರಗಟ್ಟಿ, ಶಾಹಿದಾ ಪಠಾಣ್, ರುಕ್ಮಿಣಿ ಬಾಗಾಡೆ, ಆಸೀಪ್ ಮುಜಾವರ, ಮುಖಂಡರುಗಳಾದ ದಿವಾಕರ ನಾಯ್ಕ, ರಾಮಲಿಂಗ್ ಜಾಧವ್, ಪ್ರತಾಪ್ ಸಿಂಗ್ ರಜಪೂತ್, ರಫೀಕ್ ಗಾಂಧಿನಗರ, ಗಜಾನನ ನಾಯ್ಕ, ಜಿ.ಆರ್.ನಾಯ್ಕ, ತುಕರಾಮ ಪರಸೋಜಿ, ಶಿವಪ್ಪ ನಾಯ್ಕ, ಮಂಜು ಶೆಟ್ಟಿ, ನರೇಂದ್ರ ರಾಣೆ, ರಫೀಕ್ ಶೇಖ್, ವಸಂತ ತಳೇಕರ್, ಇಮ್ತಿಯಾಜ್ ಮುಲ್ಲಾ, ಇನಾಯತ್ ದುದ್ಕೆ, ಅಲ್ಲಂಪ್ರಭು ಪಾಟೀಲ್, ರಾಘವೇಂದ್ರ ಭಟ್, ಚಂದ್ರು ಕೋಕಣಿ, ರಾಜಶೇಖರ ಹಳ್ಳೂರು, ದೀಪಕ ನಾಯ್ಕ ವನಶ್ರೀನಗರ ಮತ್ತು ನಗರ ಸಭಾ ಅಧಿಕಾರಿಗಳಾದ ವಿ.ಎಸ್.ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top