Slide
Slide
Slide
previous arrow
next arrow

ಮಕ್ಕಳನ್ನ ಬಿಟ್ಟು ಹೋಗುವ ಸಾರಿಗೆ ಬಸ್ ಚಾಲಕರಿಗೆ ಶಾಸಕಿ ಎಚ್ಚರಿಕೆ!!

300x250 AD

ಕಾರವಾರ: ಬಸ್ ಪಾಸ್ ಇರುವ ಶಾಲೆಗೆ ಹೋಗುವ ಮಕ್ಕಳನ್ನು ವಿನಾಕಾರಣ ಚಾಲಕರು, ನಿರ್ವಾಹಕರು ಬಿಟ್ಟು ಹೋಗುತ್ತಾರೆ ಎಂದು ಪಾಲಕರ ಮೂಲಕ ನನ್ನ ಗಮಕ್ಕೆ ಬಂದಿದೆ. ಇದು ಕಡೆಯ ಎಚ್ಚರಿಕೆ. ಮುಂದೆ ಇದು ಪುನರಾವರ್ತನೆಯಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರವಿಲ್ಲದೆ ಆಗುತ್ತಿರುವ ಕುರಿತು ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳನ್ನು ಕರೆತರದವರು, ಬಸ್ ನಿಲ್ಲಿಸದವರ ಮೇಲೆ ಕ್ರಮ ಕೈಗೊಳ್ಳಬೇಕು. ಇದು ಮತ್ತೆ ಪುನರಾವರ್ತನೆಯಾಗಬಾರದು ಎಂದು ಎನ್ಡಬ್ಲುಕೆಎರ್‌ಟಿಸಿ ಡಿಸಿ ಅವರಿಗೆ ಸೂಚಿಸಿದರು.
ನಿತ್ಯವೂ ಬಸ್ ಸಮಸ್ಯೆ ಇರುತ್ತದೆ. ಇದರ ಬಗ್ಗೆ ಅಧಿಕಾರಿಗಳಿಗೆ ಸಂಪರ್ಕ ಮಾಡುತ್ತಲೆ ಇರತ್ತೇನೆ. ರಸ್ತೆ ಸಮಸ್ಯೆ ಎಂದು ಹೇಳುವ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ನಾಳೆಯಿಂದಲೇ ಹೊಟೇಗಾಳಿ ಬಸ್ ಸಂಚಾರ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನೂರಾರು ಬಸ್ ಓಡಾಡಿದರೂ ಶಾಲಾ ಮಕ್ಕಳ ಅನುಕೂಲಕ್ಕೆ ಬಸನ್ನು ನಿಲ್ಲಿಸುವುದಿಲ್ಲ. ಬಿಸಿಲಿನಲ್ಲಿ ಮಕ್ಕಳು ನಿಲ್ಲುತ್ತಾರೆ. ಹೆದ್ದಾರಿಯಲ್ಲಿ ಸಾಗುವ ಪ್ರತಿ ಬಸ್‌ನ್ನು ನಿಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದು ಕೆಎಸ್‌ಆರ್ಟಿಸಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಘಾಡಸಾಯಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳಗಾಕ್ಕೆ ರಾತ್ರಿ ಹಾಲ್ಟಿಂಗ್ ಬಸ್ ಒದಗಿಸಬೇಕು. ಹಳಗಾ ಮತ್ತು ಉಳಗಾಕ್ಕೆ ಬಸ್ ಸಂಚಾರ ಆಗುವಂತೆ ಕ್ರಮಕೈಗೊಳ್ಳಬೇಕು. ಹಾಗೂ ಸಂಜೆ 4.30 ಕ್ಕೆ ಹೊರಡುವ ಬಸ್‌ನ್ನು ಕೂಡ ಬಿಡಬೇಕು ಎಂದು ಸೂಚನೆ ನೀಡಿದರು. ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಶಾಲೆಗೆ ಹೋಗುವ ಮಕ್ಕಳು ಬಸ್ ಇಲ್ಲದಿದ್ದಾಗ ಪರದಾಡುತ್ತಾರೆ. ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು. ಬೆಳಿಗ್ಗೆ ಕಡವಾಡ ಕಾರವಾರ ಬಸ್ ಕಡವಾಡದಲ್ಲಿಯೇ ಪುಲ್ ಆಗುತ್ತಿದೆ. ಶಿರವಾಡದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಿರವಾಡ ರೈಲು ನಿಲ್ದಾಣದಿಂದ ಒಂದು ಬಸ್‌ನ್ನು ಬೆಳಿಗ್ಗೆ 8.00 ಕ್ಕೆ ಅನುಕೂಲ ಕಲ್ಪಿಸಲು ವ್ಯವಸ್ಥಾಪಕರಿಗೆ ಸೂಚಿಸಿದರು.
ಗೊಟೆಗಾಳಿ ಗೊಯರ್ ಮಡಕರ್ಣಿ ಬಸ್ ಇಲ್ಲದೆ ವಿದ್ಯಾರ್ಥಿಗಳು ದೂರದವರೆಗೆ ನಡೆದು ಹೋಗುತ್ತಾರೆ. ಅಲ್ಲಿ ಹಲವು ವಿದ್ಯಾರ್ಥಿಗಳು ಭಯದಲ್ಲಿಯೇ ಶಾಲಾ ಕಾಲೇಜಿಗೂ ಹೋಗುತ್ತಾರೆ. ಈ ಭಾಗದಲ್ಲಿ ಮುತುವರ್ಜಿ ವಹಿಸಿ ಮಿನಿ ಬಸ್ ಒದಗಿಸಲು 30 ಲಕ್ಷ ಅನುದಾನವನ್ನು ಮೀಸಲಿರಿಸಿದ್ದೇನೆ. ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು. ವಾಸ್ತವ್ಯದ ಬಸ್‌ಗಳನ್ನು ನಿಲ್ಲಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡುತ್ತಾರೆ. ಚಾಲಕರಿಗೆ, ನಿರ್ವಾಹಕರಿಗೆ ಅನುಕೂಲಕ್ಕೆ ವ್ಯವಸ್ಥೆಯನ್ನು ಮಾಡುತ್ತಾರೆ. ಬಸ್‌ಗಳನ್ನು ಬಿಟ್ಟರೆ ಅಲ್ಲಿಯ ಜನರು ಅನುಕೂಲ ಮಾಡಿ ಕೊಡುತ್ತಾರೆ ಎಂದು ಡಿಪೋ ಮ್ಯಾನೇಜರ್ ಅವರಿಗೆ ಸೂಚಿಸಿದರು. ಕೊರೊನಾ ನಂತರ ಚಾಲಕರು, ನಿರ್ವಾಹಕರ ನೇಮಕಾತಿಯಾಗಿಲ್ಲ. ಗುತ್ತಿಗೆ ಆದಾರದಲ್ಲಿ ಚಾಲಕರನ್ನು ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಕೊರಿಕೆಯ ಮೆರೆಗೆ ಬಸ್‌ಗಳನ್ನು ನಿಲ್ಲಿಸಬೇಕು. ಜನರಿಗೆ ಸೇವೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಇಒ ಆನಂದಕುಮಾರ ಬಾಲಪ್ಪನವರ, ಡಿಟಿಒ ಸುರೇಶ್, ಬಿಜೆಪಿ ಗ್ರಾಮಿಣ ಮಂಡಲದ ಅಧ್ಯಕ್ಷರಾದ ಸುಭಾಷ ಗುನಗಿ, ನಗರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ, ಮುಖಂಡರಾದ ರಾಜೇಶ ನಾಯಕ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top