Slide
Slide
Slide
previous arrow
next arrow

ಟೆಂಪೋ,ಬೈಕ್ ನಡುವೆ ಅಪಘಾತ: ಅಂಬ್ಯುಲೆನ್ಸ್ ವಿಳಂಬ, ಮಾನವೀಯತೆ ಮೆರೆದ ಶಾಸಕಿ

300x250 AD

ಕಾರವಾರ: ಟೆಂಪೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಕುಮಟಾ ಮೂಲದ ಫೊಟೊಗ್ರಾಫರ್ ಮಹಾಬಲೇಶ್ವರ ಅಂಬಿಗ ಮೃತಪಟ್ಟವರು. ತಾಲೂಕಿನ ಅಮದಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಮಹಾಬಲೇಶ್ವರ, ಏಕಾಏಕಿ ತಿರುವಿನಲ್ಲಿ ಬೈಕ್ ತಿರುಗಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನ ಹಿಂದೆ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುಂದೆ ಏಕಾಏಕಿ ತಿರುಗಿದ್ದ ಮಹಾಬಲೇಶ್ವರ ಅವರ ಬೈಕ್‌ಗೆ ಡಿಕ್ಕಿಯಾಗಿದೆ.
ಟೆಂಪೋ ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮಹಾಬಲೇಶ್ವರ ಅವರು ಬೈಕ್ ಸಮೇತ ಹಾರಿ ಎದುರು ಚಲಿಸುತ್ತಿದ್ದ ಕಾರಿಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಮಹಾಬಲೇಶ್ವರ ಗಂಭೀರ ಗಾಯಗೊಂಡಿದ್ದರು. ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ಸ್ಥಳದಲ್ಲೇ ಕೆಲ ಕಾಲ ನಿಂತು, ಅಂಬ್ಯುಲೆನ್ಸ್, ಆಸ್ಪತ್ರೆಗೆ ಕರೆ ಮಾಡುವಲ್ಲಿ ಸಹಕರಿಸಿದರು. ಆದರೆ ಅಂಬ್ಯುಲೆನ್ಸ್ ಸ್ಥಳಕ್ಕೆ ಬರುವುದು ವಿಳಂಬವಾದ ಕಾರಣ ಶಾಸಕಿ ಐಆರ್‌ಬಿ ವಾಹನವನ್ನ ಸ್ಥಳಕ್ಕೆ ಕರೆಯಿಸಿದ್ದಾರೆ. ಐಆರ್‌ಬಿ ವಾಹನದಲ್ಲಿ ಕ್ರಿಮ್ಸ್ಗೆ ಸಾಗಿಸುವ ಮಾರ್ಗಮಧ್ಯೆ ಅಂಬ್ಯುಲೆನ್ಸ್ ಸಿಕ್ಕಿದ್ದು, ಬಳಿಕ ಅದಕ್ಕೆ ಸ್ಥಳಾಂತರಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಾಬಲೇಶ್ವರ ಅಸುನೀಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top