ಕಾರವಾರ: ಬುಧವಾರ ನಿವೃತ್ತರಾದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ದೇವಿದಾಸ್ ಚೌಹಾಣ್ ಅವರನ್ನು ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ದೇವಿದಾಸ್ ಅವರ ವಿಚಾರ ಧಾರೆಗಳು ಉತ್ತಮವಾಗಿದ್ದವು. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಉದ್ದೇಶಗಳನ್ನಿಟ್ಟುಕೊಂಡು ಬಂದಿದ್ದರು. ಆದರೆ ಅವರ ನಿರೀಕ್ಷೆಯಂತೆ ಇಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅವರಿಗೆ ಕೆಲಸ ಮಾಡಲಾಗಿಲ್ಲ. ಆದರೂ ತಮ್ಮಿಂದ ಸಾಧ್ಯವಾದಷ್ಟು ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಸಂಘದ ಅಧ್ಯಕ್ಷ ಮಾಧವ ನಾಯಕ ಹಾರೈಸಿದ್ದಾರೆ.
ಅಲ್ಲದೇ ದೇವಿದಾಸ್ ಅವರ ನಿವೃತ್ತಿಯಿಂದ ತೆರವಾದ ಜಾಗಕ್ಕೆ ದುರ್ಗಾದಾಸ್ ಎನ್ನುವವರನ್ನು ನೇಮಕ ಮಾಡಲಾಗಿದ್ದು, ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅವರು ಕೂಡ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಉತ್ತಮ ಸಂಪರ್ಕವನ್ನಿಟ್ಟುಕೊಳ್ಳಲಿದ್ದಾರೆ0ದು ಭಾವಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ದೀಪಕ್ ನಾಯ್ಕ, ಅನೀಲ್ ಮಾಳ್ಸೇಕರ್, ರಾಜೇಶ್ ಶೇಟ್, ದೊರೆಸ್ವಾಮಿ, ಮನೋಜಕುಮಾರ್ ನಾಯ್ಕ, ರಾಮದಾಸ ನಾಯಕ, ಅಂಕೋಲಾ, ರವಿ ನಾಯಕ ಅಂಕೋಲಾ, ರಾಮಚಂದ್ರ ನಾಯಕ ಅಂಕೋಲಾ, ಜಿ.ಜೆ.ನಾಯ್ಕ ಕುಮಟಾ ಮುಂತಾದವರಿದ್ದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಕಾರವಾರದ ರಾಮಚಂದ್ರ ಗಾಂವಕರ್, ಅಂಕೋಲಾದ ಶಶಿಕಾಂತ್ ಕೊಲ್ವೇಕರ್, ಭಟ್ಕಳದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮು ಅರ್ಗೇಕರ್ ಹಾಗೂ ಇಲಾಖೆಯ ಇತರ ಸಿಬ್ಬಂದಿ ಇದ್ದರು.