Slide
Slide
Slide
previous arrow
next arrow

ಐಪಿಎ ಪರೀಕ್ಷೆಯಲ್ಲಿ ಅಬಾಕಸ್ ವಿದ್ಯಾರ್ಥಿಗಳ ಸಾಧನೆ

300x250 AD

ಅಂಕೋಲಾ: ಐಡಿಯಲ್ ಪ್ಲೇ ಅಬಾಕಸ್ ಚೆನ್ನೈ ವತಿಯಿಂದ ಶಿವಮೊಗ್ಗಾದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಮತ್ತು ಸ್ಪೀಡ್ ಅರಿಥ್‌ಮೆಟಿಕ್ ಕಾಂಪಿಟೇಶನ್‌ನಲ್ಲಿ ಐಪಿಎ ನ್ಯಾಶನಲ್ ಅಬಾಕಸ್ ಸಂಸ್ಥೆಯ ಅಂಕೋಲಾ ಮತ್ತು ಕಾರವಾರದ ನಂದನಗದ್ದಾ ಶಾಖೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಅಂಕೋಲಾದ ಅಭಿಷೇಕ ನಾಯಕ, ವಿಸ್ಮಯಾ ಎಸ್., ಆರುಷ್ ಪಿ.ಶೇಡಗೇರಿ 4ನೇ ರ‍್ಯಾಂಕ್, ಸ್ಪಂದನಾ ಎಸ್.ಎ., ನಿಯತಾ ವಿ.ಪ್ರಭು, ಗಗನ ಆರ್.ಪೂಜಾರಿ ಸ್ಪರ್ಧೆಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದು, ಸಾನ್ವಿ ಎನ್.ದೇವರಬಾವಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ನಂದನಗದ್ದಾ ವಿದ್ಯಾರ್ಥಿಗಳಾದ ಪ್ರಜ್ವಲ್ ಡಿ.ನಾಯ್ಕ 3ನೇ ರ‍್ಯಾಂಕ್ ಹಾಗೂ ಅರ್ಪಿತಾ ಜೆ.ಗೋಸಾವಿ 4ನೇ ರ‍್ಯಾಂಕ್ ಪಡೆದಿದ್ದಾರೆ.
ಅಂಕೋಲಾದ ಐಪಿಎ ನ್ಯಾಶನಲ್ ಅಬಾಕಸ್ ಫ್ರಾಂಚೈಸಿಯ ಪ್ರಶಾಂತ ಎಸ್.ಶೆಟ್ಟಿ, ಶಿಕ್ಷಕಿ, ನಂದನಗದ್ದಾದ ಫ್ರಾಂಚೈಸಿ ಜಯಶ್ರೀ ಪಿ.ಶೆಟ್ಟಿ, ಸಿಐ ಶಿಕ್ಷಕಿ ಆರತಿ ಆರ್.ಹಾರ್ವಾಡೇಕರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಸಾಧನೆಗೆ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top