ಸಿದ್ದಾಪುರ: ಪಟ್ಟಣದ ಹಾಳದಕಟ್ಟ ನಾಗರಕಟ್ಟ ವಿಭಾಗದ ಶ್ರೀಕ್ಷೇತ್ರಪಾಲ ಶ್ರೀನಾಗದೇವತಾ ಹಾಗೂ ಶ್ರೀಚೌಡೇಶ್ವರಿ ದೇವಾಲಯದ ಆವರಣದಲ್ಲಿ ಪೊಲೀಸ್ ಜನಸಂಪರ್ಕ ಸಭೆ ನಡೆಯಿತು.
ಪ್ರೊಬೆಶನರಿ ಪಿ.ಎಸ್.ಐ ಅಕ್ಷಯ್‌ಕುಮಾರಿ ಮಾತನಾಡಿ, ಇತ್ತೀಚಿಗೆ ಅಪರಾಧಗಳು, ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳ್ಳತನಗಳು ಆಗುತ್ತಿರುವುದರಿಂದ ಅನುಮಾನಾಸ್ಪದವಾಗಿ ಓಡಾಡುತ್ತಿರುವವರ ಬಗ್ಗೆ ಗಮನ ಇರಲಿ. ವಾಹನವನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಅನ್ನು ಧರಿಸಿ ಎಂದು ತಿಳಿಸಿದರು.
ಸಾಯಿಸ್ಫೂರ್ತಿ ಮತ್ತು ಪ್ರಾಚಿ ಪ್ರಾರ್ಥನಾ ಗೀತೆ ಹಾಡಿದರು. ನಾಗದೇವತಾ ಮಂದಿರದ ಅಧ್ಯಕ್ಷ ಪ್ರಶಾಂತ ಶೇಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ವೇದಮೂರ್ತಿ ಮೋಹನ್‌ಕುಮಾರ್ ಜೈನ್ ಕಾರ್ಗಲ್, ನಾಗದೇವತಾ ಮಂಡಳಿಯ ಹಿರಿಯ ಸದಸ್ಯ ಡಿ.ಎನ್.ಶೇಟ್, ಐ.ಕೆ.ನಾಯ್ಕ, ರವಿ ಗಾಂಜೇಕರ್, ಪೊಲೀಸ್ ಸಿಬ್ಬಂದಿ ಪೂರ್ಣಿಮಾ ನಾಯ್ಕ ಹಾಗೂ ಶಾಂತಲಾ ನಾಯ್ಕ ಉಪಸ್ಥಿತರಿದ್ದರು.