Slide
Slide
Slide
previous arrow
next arrow

ಶಿರಸಿ ಲಯನ್ಸ್ ಕ್ಲಬ್‌ಗೆ RC ಮತ್ತು ZC ಭೇಟಿ: ಸಾಧನೆ ಬಗ್ಗೆ ಶ್ಲಾಘನೆ

300x250 AD

ಶಿರಸಿ : ಉತ್ತರ ಕನ್ನಡ ಜಿಲ್ಲೆಯ 10 ಲಯನ್ಸ್ ಕ್ಲಬ್ ಮತ್ತು 3 ಲಿಯೋ ಕ್ಲಬ್‌ಗಳನ್ನು ಹೊಂದಿದ ರೀಜನ್-7 ರ ನಾಯಕತ್ವವನ್ನು ವಹಿಸಿರುವ ರೀಜನ್ ಛೇರ್‌ಪರ್ಸನ್ MJF ಲಯನ್ ಜ್ಯೋತಿ ಭಟ್‌ ಲಯನ್ಸ್ ಕ್ಲಬ್’ಗೆ ಭೇಟಿ ನೀಡಿದರು. ಇದಕ್ಕೂ ಮುನ್ನ ರೀಜನ್’ನ ZONE II ರ ಝೋನ್ ಛೇರ್‌ಪರ್ಸನ್ನರಾದ MJF ಲಯನ್ ನಾಗರಾಜ ಭಟ್‌ ಭೇಟಿ ನೀಡಿದರು.

ಕಾರ್ಯಕ್ರಮದಲ್ಲಿ ಧ್ವಜವಂದನೆಯನ್ನು ಲಯನ್ ಮಂಗಳಾ ಹೆಗಡೆ ನಡೆಸಿಕೊಟ್ಟರು. ವಿಶ್ವಶಾಂತಿಗಾಗಿ ಒಂದು ನಿಮಿಷ ಮೌನವನ್ನು ಆಚರಿಸಿದ ನಂತರ ಕ್ಲಬ್ಬಿನ ಅಧ್ಯಕ್ಷ MJF ಲಯನ್ ತ್ರಿವಿಕ್ರಮ ಪಟವರ್ಧನ ಎಲ್ಲರನ್ನು ಸ್ವಾಗತಿಸಿದರು. ZC ಪರಿಚಯವನ್ನು ಲಯನ್ ಎಮ್. ಐ. ಹೆಗಡೆ ಮತ್ತು RC ಪರಿಚಯವನ್ನು ಲಯನ್ ಪ್ರತಿಭಾ ಹೆಗಡೆಯವರು ಮಾಡಿದರು. ಈ ವರ್ಷದಲ್ಲಿ ನಡೆಸಿದ ಕಾರ್ಯ-ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ MJF ಲಯನ್ ರಮಾ ಪಟವರ್ಧನ ಒಪ್ಪಿಸಿದರು. ಲಿಯೋ ಕ್ಲಬ್ ಶಿರಸಿಯ ವರದಿಯನ್ನು ಲಿಯೋ ಅಡ್ವೈಸರ್ ಲಯನ್ ಅಶ್ವತ್ಥ ಹೆಗಡೆ ಹಾಗೂ ಲಿಯೋ ಕ್ಲಬ್ ಶ್ರೀನಿಕೇತನದ ವರದಿಯನ್ನು ಲಿಯೋ ಕ್ಲಬ್ಸ್ ಕೋ ಛೇರ್‌ಪರ್ಸನ್ ಲಯನ್ ಅಶೋಕ ಹೆಗಡೆ ನೀಡಿದರು. ಸೇವಾ ಚಟುವಟಿಕೆಯ ಅಂಗವಾಗಿ ಪ್ರಾಣಿಗಳ ಅನಾಥಾಶ್ರಮವನ್ನು ನಡೆಸುತ್ತಿರುವ ಡಾ|| ರಾಜೇಂದ್ರ ಸಿರ್ಸಿಕರರ ಶ್ರೀ ಪದ್ಮ ಸೇವಾ ಟ್ರಸ್ಟಿಗೆ ಧನಸಹಾಯವನ್ನು ನೀಡಲಾಯಿತು. ಜ್ಯೋತಿ ಭಟ್ಟರೂ ಕೂಡ ತಮ್ಮ ಭೇಟಿಯ ಅಂಗವಾಗಿ ವಿಶೇಷ ಚೇತನ ಯುವಕ ದಿನೇಶರವರಿಗೆ ಧನ ಸಹಾಯವನ್ನು ಮಾಡಿದರು. ನಾಗರಾಜ ಭಟ್ ಮತ್ತು ಜ್ಯೋತಿ ಭಟ್ ಇಬ್ಬರೂ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶಿರಸಿ ಕ್ಲಬ್ ಸಾಧನೆಯನ್ನು ಶ್ಲಾಘಿಸಿದರು. ಹಿರಿಯ ಸದಸ್ಯ MJF ಲಯನ್ ಉದಯ ಸ್ವಾದಿಯವರಿಗೆ RCಯವರು ಡಿಸ್ಟ್ರಿಕ್ಟ್ ಪಿನ್ ನೀಡಿ ಗೌರವಿಸಿದರು. ಕಾರ್ಯದರ್ಶಿಯವರು ಎಲ್ಲ ಗೌರವಾನ್ವಿತರಿಗೆ ಲಯನ್ ಬಂಧುಗಳನ್ನು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

300x250 AD
Share This
300x250 AD
300x250 AD
300x250 AD
Back to top