Slide
Slide
Slide
previous arrow
next arrow

ನ. 26ಕ್ಕೆ ‘ಕದಂಬ ಮ್ಯೂಸಿಕ್ ಸ್ಟುಡಿಯೊ’ ಸಾಂಪ್ರದಾಯಿಕ ಶುಭಾರಂಭ

300x250 AD

ಶಿರಸಿ: ಕದಂಬ ಕಲಾ ವೇದಿಕೆ, ಶಿರಸಿ, ಕದಂಬ ಮ್ಯೂಜಿಲ್ ಸ್ಟುಡಿಯೊ ವಿಶಿಷ್ಟ ಹಾಗೂ ವಿನೂತವಾಗಿ ಸಿದ್ದಗೊಂಡಿರುವ ಸಿಂಗಿ0ಗ್ & ರೆಕಾರ್ಡಿಂಗ್ ಸ್ಟುಡಿಯೊ ಇದರ ಸಾಂಪ್ರದಾಯಿಕ ಉದ್ಘಾಟನಾ ಕಾರ್ಯಕ್ರಮವು ನ. 26 ರಂದು ಸಂಜೆ 6 ಗಂಟೆಗೆ ನಗರದ ಸಿಪಿ ಬಜಾರಿನ ಸಂಕಲ್ಪ ಬಿಲ್ಡಿಂಗ್, 2ನೇ ಮಹಡಿಯ ಕದಂಬ ಕಲಾವೇದಿಕೆ ಕಚೇರಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಭಾಗವಹಿಸಲಿದ್ದಾರೆ. ವೇದಿಕೆಯ ಉದ್ಘಾಟಕರಾಗಿ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಂಬ ಕಲಾ ವೇದಿಕೆಯ ಅಧ್ಯಕ್ಷರಾದ ಶಿರಸಿ ರತ್ನಾಕರ ವಹಿಸಲಿದ್ದಾರೆ. ಸಹಾಯಕ ಆಯುಕ್ತ ದೇವರಾಜ ಆರ್., ನಗರಸಭೆ ಶಿರಸಿ ಅಧ್ಯಕ್ಷ ಗಣಪತಿ ನಾಯ್ಕ ,ಶಿರಸಿ ಡಿ.ಎಸ್ಪಿ. ರವಿ ಡಿ. ನಾಯ್ಕ , ಭೀಮಣ್ಣ ನಾಯ್ಕ, ಶ್ರೀಮತಿ ಮಂಗಲಾ ನಾಯ್ಕ, ಪ್ರೊ. ನಾಗೇಶ ನಾಯ್ಕ ಕಾಗಲ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ, ಡಾ. ವೆಂಕಟರಮಣ ಹೆಗಡೆ, ಗಣಪತಿ ಭ ಟ್ ಕರ್ಜಗಿ, ರವೀಂದ್ರ ನಾಯ್ಕ, ಪ್ರೊ. ಕೆ.ಎನ್. ಹೊಸ್ಮನಿ ಹಾಗೂ ಇನ್ನೂ ಅನೇಕ ಗಣ್ಯರು ಆಗಮಿಸಲಿದ್ದಾರೆ.
ಶ್ರೀ ಗಣೇಶ್ ಅಲ್ಯೂಮೀನಿಯಂ ಶಿರಸಿಯ ಸತೀಶ ಮೆಸ್ತ. ಧ್ವನಿ ಗ್ರಹಣ ತಂತ್ರಜ್ಞ ಉದಯ ಪೂಜಾರ , ವಿದ್ಯುತ್ ಗುತ್ತಿಗೆದಾರ ಅಶೋಕ ನಾಯ್ಕ ಬಿಳಿಗಿರಿಕೊಪ್ಪ,ಕಲಾ ಪೋಷಕ ಲಕ್ಷ್ಮಣ ಶೇಟ, ಕೃಷಿಕರು ಹಾಗೂ ಕಲಾ ಪೋಷಕರಾದ ಮಹೇಶ ನಾಯ್ಕ ಉಪ್ಪಳೇಕೊಪ್ಪ ಇವರನ್ನು ಸನ್ಮಾನಿಸಲಾಗುವುದು.
ಧಾರ್ಮಿಕ ಕಾರ್ಯಕ್ರಮದ ಪೌರೋಹಿತ್ಯವನ್ನು ವೇದಮೂರ್ತಿ ಗಣೇಶ ಕೆದ್ಲಾಯರವರು ನಿರ್ವಹಿಸಲಿದ್ದು ಕಾರ್ಯಕ್ರಮದ ನಿರ್ವಹಣೆಯನ್ನು ಉಮಾಕಾಂತ ಗೌಡ, ಶ್ರೀಮತಿ ಜ್ಯೋತಿ ರತ್ನಾಕರ ಮತ್ತು ದಿವ್ಯಾ ಶೇಟ್ ನಿರ್ವಹಿಸುವರು.
ಸಾರ್ವಜನಿಕರು, ಕಲಾಪೋಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಂದ0ಬ ಕಲಾವೇದಿಕೆ ವಿನಂತಿಸಿರುತ್ತಾರೆ.

300x250 AD

Share This
300x250 AD
300x250 AD
300x250 AD
Back to top