• first
  second
  third
  Slide
  Slide
  previous arrow
  next arrow
 • ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಯನ್ನು ಐತಿಹಾಸಿಕ ಜಾಥವನ್ನಾಗಿ ಸಂಘಟಿಸಲು ತೀರ್ಮಾನ: ರವೀಂದ್ರ ನಾಯ್ಕ

  300x250 AD

  ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿಸೆಂಬರ್ 10 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಬೃಹತ್ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಯನ್ನು ಐತಿಹಾಸಿಕ ಜಾಥವನ್ನಾಗಿ ಸಂಘಟಿಸಲು ಹೋರಾಟಗಾರರ ವೇದಿಕೆಯು ತೀರ್ಮಾನಿಸಿದೆ.

   ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.

   ಅರಣ್ಯವಾಸಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ನೀಡುವಲ್ಲಿ ಉಂಟಾದ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಅತಂತ್ರರಾಗುವ ಸಂದರ್ಭ ಬಂದೊದಗಿದೆ. ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಜಾಥ ಸಂಘಟಿಸಲಾಗಿದ್ದು ರಾಜ್ಯದ 16 ಜಿಲ್ಲೆಗಳಿಂದ ಅರಣ್ಯವಾಸಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

  300x250 AD

   ಸಭೆಯಲ್ಲಿ ಕೃಷ್ಣ ಮರಾಠಿ ಮಂಜಗುಣಿ, ಎಮ್ ಆರ್ ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ ಬಂಡಲ, ಎಮ್ ಕೆ ನಾಯ್ಕ ಕಂಡ್ರಾಜಿ, ನೆಹರೂ ನಾಯ್ಕ ಬಿಳುರೂ, ಇಬ್ರಾಹಿಂ ಗೌಡಳ್ಳಿ, ದುಗ್ಗು ಮರಾಠಿ ಔಡಾಳ ಮುಂತಾದವರು ಉಪಸ್ಥಿತರಿದ್ದರು.

  ಪ್ರಬಲ ಹೋರಾಟಕ್ಕೆ ನಿರ್ಧಾರ:
   ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಹಾಗೂ ಅರಣ್ಯವಾಸಿಗಳ ಪರವಾಗಿ ಸರಕಾರ ಕ್ರಮ ಜರುಗಿಸುವ ಅವಶ್ಯಕತೆ ಇರುವುದರಿಂದ ಪ್ರಬಲ ಹೋರಾಟ ಮುಂದುವರೆಸಲು ಸಭೆ ತೀರ್ಮಾನಿಸಿತು ಎಂದು ರವೀಂದ್ರ ನಾಯ್ಕ ತಿಳಿಸಿದರು.

  Share This
  300x250 AD
  300x250 AD
  300x250 AD
  Back to top