ಜೋಯಿಡಾ: ತಾಲೂಕಿನ ಜೋಯಿಡಾ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗುಂದ ಪ್ರೌಢಶಾಲಾ ಮಕ್ಕಳು ಸಾಧನೆ ಮಾಡಿದ್ದಾರೆ.
ಕವಾಲಿಯಲ್ಲಿ ನಿಧಿ ಉಪಾಧ್ಯ, ಕನ್ನಿಕಾ ಭಟ್ಟ, ಮಿರಿಯಂ ಫರ್ನಾಂಡಿಸ್, ಸುಷ್ಮಿತಾ ಮುಸ್ಕರ್, ಸುಚಿತ್ರಾ ಸಾವರ್ಕರ್,ಸಂಜೀವಿನಿ ಭಾಗ್ವತ, ಪ್ರಥಮ ಸ್ಥಾನ ಹಾಗೂ ಕ್ವಿಜ್ ನಲ್ಲಿ ವಿಜೇತ್ ದೇಸಾಯಿ ,ಗಣೇಶ್ ದಬಗಾರ ಪ್ರಥಮ ಸ್ಥಾನ ಪಡೆದು, ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳ ಈ ಸಾಧನೆಗೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸದಾನಂದ ಉಪಾಧ್ಯ ಹಾಗೂ ಸದಸ್ಯರು, ಶಾಲೆಯ ಮುಖ್ಯೋಪಾಧ್ಯರಾದ ಜೊಸೆಫ್ ಗೊನ್ಸಾಲ್ವಿಸ್ , ಹಾಗೂ ಸಹ ಶಿಕ್ಷಕರು ಮತ್ತು ನಾಗರಿಕರು ಅಭಿನಂದಿಸಿದ್ದಾರೆ.