Slide
Slide
Slide
previous arrow
next arrow

ಶಿರಾಲಿ ವೃತ್ತದಿಂದ ಚಿತ್ರಾಪುರ ಮಠದ ರಸ್ತೆಗೆ ಮರುನಾಮಕರಣ: ಮಾಹಿತಿ‌ ಇಲ್ಲಿದೆ

300x250 AD

ಭಟ್ಕಳ: ತಾಲೂಕಿನ ಶಿರಾಲಿ ವೃತ್ತದಿಂದ ಚಿತ್ರಾಪುರ ಶ್ರೀ ಮಠದ ಸಮೀಪ ವೃತ್ತದವರೆಗೆ ಇರುವ ರಸ್ತೆಗೆ ಶ್ರೀಮದ್ ಸ್ವಾಮಿ ಪಾಂಡುರಂಗಾಶ್ರಮ ಮಾರ್ಗ ಎಂದು ಮರುನಾಮಕರಣ ಮಾಡಲಾಗಿದ್ದು, ಶ್ರೀ ಮಠದ ಸದ್ಯೋಜ್ಞಾತ ಶಂಕ ರಾಶ್ರಮ ಸ್ವಾಮೀಜಿ ಅವರು ನಾಮ ಫಲಕ ಅನಾವರಣಗೊಳಿಸಿದರು.

ಶ್ರೀ ಚಿತ್ರಾಪುರ ಮಠದ ಗುರುಪರಂಪರೆಯ 8ನೇ ಗುರುಗಳಾದ ಶ್ರೀಮದ್ ಪಾಂಡುರAಗ ಸ್ವಾಮೀಜಿಯವರು ಶಿರಾಲಿ ಗ್ರಾಮದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳಲ್ಲಿ ಶಿರಾಲಿ ಅಂಚೆ ಕಚೇರಿ, ವಾರದ ಸಂತೆ, ಶಾಲೆ, ಚಿತ್ರಾಪುರ ಶ್ರೀ ಮಠದಿಂದ ಕಟಗಾರಕೊಪ್ಪದವರೆಗೆ ರಸ್ತೆ ನಿರ್ಮಾಣ ಪ್ರಮುಖವಾಗಿವೆ. ಊರಿನ ಅಭಿವೃದ್ಧಿಗಾಗಿ ಶ್ರೀಗಳು ಕೈಗೆತ್ತಿಕೊಂಡ ಯೋಜನೆಗಳು, ಸಾಧನೆಯ ಸ್ಮರಣಾರ್ಥವಾಗಿ ಇದೀಗ ಶಿರಾಲಿ ಗ್ರಾಮ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಅನುಮತಿ ಪಡೆದು ಶಿರಾಲಿಯಿಂದ ಚಿತ್ರಾಪುರದವರೆಗಿನ ರಸ್ತೆಗೆ ಸ್ವಾಮೀಜಿಯವರ ಹೆಸರನ್ನಿಟ್ಟು ನಾಮಫಲಕ ಅನಾವರಣಗೊಳಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಚಿತ್ರಾಪುರ ಶ್ರೀ ಮಠದ ಪ್ರಧಾನ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಶಿರಾಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಭಾಸ್ಕರ ದೈಮನೆ, ವೆಂಕಟೇಶ ನಾಯ್ಕ, ಮಾರುತಿ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೈ, ಎ.ಬಿ. ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top