ಅಂಕೋಲಾ: ಸಮಾಜದ ಚಟುವಟಿಕೆಯ ಜೊತೆಗೆ ಮಕ್ಕಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕು ಎಂದು ಹಿಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಕೆಡಿಸಿಸಿ ನಿದೇರ್ಶಕ ಬಾಬು ಸುಂಕೇರಿ ನುಡಿದರು.
ಅವರು ಶ್ರೀರಾಮಲಿಂಗೇಶ್ವರ ಗೆಳೆಯರ ಬಳಗ ಹಾಗೂ ಯುವಕರ ಸಂಘ ತಿಂಗಳಬೈಲ್ ಹಿಲ್ಲೂರ್ ಸಮಸ್ತ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀಕೃಷ್ಣೋತ್ಸವ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸಂಘಗಳ ಉದ್ದೇಶ ಸಮಾಜ ಪರವಾಗಿದ್ದು ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಸಂಘಟಿಸುವುದರ ಮೂಲಕ ಗೆಳೆಯರ ಬಳಗ ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.
ಪ್ರವೀಣ ನಾಯಕ ಹಿಲ್ಲೂರು ಮಾತನಾಡಿ, ಗೆಳೆಯರ ಬಳಗದ ಉದ್ದೇಶ ಉತ್ತಮವಾಗಿದ್ದು ನಮ್ಮಿಂದ ಎಲ್ಲಾ ಸಹಾಯ ಸಹಕಾರ ನೀಡುವುದಾಗಿ ನುಡಿದರು. ಇನ್ನೋರ್ವ ಮುಖ್ಯ ಅಥಿತಿ ಸಚಿತ ನಾಯಕ ಮಾತಾಡಿ ಸಂಘವನ್ನು ಮುನ್ನೆಡೆಸಲು ಸಲಹೆ ಸೂಚನೆ ನೀಡುವುದಾಗಿ ನುಡಿದರು.
ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಾಪಕರು, ಊರಿನ ಹಿರಿಯರಾದ ಗಣಪತಿ ಹೆಗಡೆ ಪಂಚಾಯತ ಸದಸ್ಯರುಗಳಾದ ಶಿವಾನಂದ ಗಣಪು ಗೌಡ, ಶಸಿಕಲಾ ವಿಠ್ಠಲ ಸಿಂದೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಉಪಸ್ಥಿತರಿದ್ದರು. ಅಧ್ಯಕ್ಷತೆವಹಿಸಿ ಮಾತನಾಡಿದ ಜಗದೀಶ ಆರ್. ನಾಯಕ ಗೆಳೆಯರ ಬಳಗವನ್ನು ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಮುನ್ನೆಡಿಸಿಕೊಂಡು ಹೋಗುವುದಾಗಿ ನುಡಿದರು. ಮತ್ತು ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶತಾಯುಷಿ ಹಾಗೂ ಅಪ್ಪಟ ಯಕ್ಷಗಾನ ಪಟು ಹಮ್ಮು ಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಬಾಬು ಸುಂಕೇರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಕ್ಕಳ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತಿಭಾ ಪುರಸ್ಕಾರ ಪತ್ರ ಹಾಗೂ ನಗದು ಬಹುಮಾನವನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಹರಿಹರ ವಿ.ಹರಿಕಾಂತ ಹಿಲ್ಲೂರ ಅವರು ವಿತರಿಸಿದರು. ಅಲ್ಲದೇ ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ಕೆಡಿಸಿಸಿ ನಿರ್ದೇಶಕ ಪ್ರಕಾಶ ಗುನಗಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ವಿನಾಯಕ ಪಟಗಾರ ಸ್ವಾಗತಿಸಿ ವಂದಿಸಿದರು. ಅಪಾರ ಪ್ರಮಾಣದ ಭಕ್ತಾಧಿಗಳು ಕೃಷ್ಣ ಮೂರ್ತಿಯನ್ನು ಮೆರವಣಿಗೆ ಮೂಲಕ ವಿಸರ್ಜನೆ ಮಾಡಿ ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾದರು.