Slide
Slide
Slide
previous arrow
next arrow

ರೋಟರಿಯಿಂದ ‘ವ್ಯಕ್ತಿ ವಿಕಸನ’ ಉಪನ್ಯಾಸ ಕಾರ್ಯಕ್ರಮ

300x250 AD

ಕಾರವಾರ: ರೋಟರಿ ಕ್ಲಬ್ ಆಫ್ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ವ್ಯಕ್ತಿ ವಿಕಸನ’ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಐಐಟಿ ಚೆನ್ನೈನ ಉಪನ್ಯಾಸಕ ವಿನೋದ ಕೊಠಾರಕರ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಮುಂದೆ ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು, ಪ್ರತಿಭಾವಂತರಿಗೆ ಎಲ್ಲೆಲ್ಲಿ, ಯಾವ ರೀತಿಯ ಅವಕಾಶಗಳು ಇವೆ ಎನ್ನುವುದನ್ನು ವಿವರಿಸಿದರು.
ಪ್ರಾರಂಭದಲ್ಲಿ ಶಾಲೆಯ ಮುಖ್ಯಧ್ಯಾಪಕಿ ಮೀನಾಕ್ಷಿ ನಾಯಕ ಸ್ವಾಗತಿಸುತ್ತ ರೋಟರಿ ಸಂಸ್ಥೆಯು ಬಹಳ ವರ್ಷಗಳಿಂದ ಶಾಲೆಗೆ ಅಥವಾ ವಿದ್ಯಾರ್ಥಿಗಳಿಗೆ ದೇಣಿಗೆಯ ರೂಪದಲ್ಲಿ ಹಲವಾರು ಸೇವೆಗಳು ಮಾಡಿರುವುದನ್ನು ಸ್ಮರಿಸಿದರು. ರೋಟರಿ ಸಂಸ್ಥೆಯಿ0ದ ವಿದ್ಯಾರ್ಥಿಗಳಿಗೆ ರಸಪ್ರಶ್ನೆಗಳನ್ನಿಟ್ಟಿದ್ದು, ಅದರಲ್ಲಿ ಗುರುನಾಥ ಭಂಡಾರಿ ಪ್ರಥಮ, ಸಂಗಮೇಶ ಹೆಚ್.ನೆಡಸೇಸಿ ದ್ವಿತೀಯ ಹಾಗೂ ಬಸವರಾಜ ಕಣಸಾಲಿ ತೃತೀಯ ಬಹುಮಾನಗಳನ್ನು ಪಡೆದರು.
ಬಹುಮಾನಗಳನ್ನು ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಪ್ರಾಯೋಜಿಸಿದ್ದರು. ಕಾರ್ಯದರ್ಶಿ ಗುರುದತ್ತ ಬಂಟ ಉಪನ್ಯಾಸಕರಾಗಿ ಬಂದಿರುವ ವಿನೋದ ಕೋಠಾರಕರರವರ ಕಿರುಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯಿ0ದ ಶಾಲೆಗೆ ಹೊಸದಾಗಿ ನಿರ್ಮಿಸಿದ ಕಟ್ಟಡಕ್ಕೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಗ್ರಿಲ್ಸ್ ಪರದೆ ಹಾಗೂ ಬಾಗಿಲನ್ನು ಅಳವಡಿಸಿಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಮತ್ತು ರೋಟರಿ ಸಂಸ್ಥೆಯಿ0ದ ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ್, ಗುರು ಹೆಗಡೆ, ಪಾಂಡುರ0ಗ ಹಳದೀಪುರಕರ, ರಾಮಚಂದ್ರ ಪಡವಳಕರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೈಲೇಶ ಹಳದಿಪೂರ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top