ಹೊನ್ನಾವರ: ತಾಲೂಕಿನ ಮಂಕಿ ಭಾಗದ ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಿನ್ನಲೆ 10 ಅಂಗಡಿಗಳಿಗೆ ಕೋಟ್ಪಾ ಕಾಯ್ದೆಯಡಿ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಸಿ ದಂಡ ವಿಧಿಸಿದರು.
ಈ ವೇಳೆ ತಾಲೂಕ ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ, ಆರೋಗ್ಯ ಶಿಕ್ಷಣಾಧಿಕಾರಿ ಆನಂದ ಶೇಟ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಎಸ್., ತಹಶೀಲ್ದಾರ ಕಛೇರಿ, ತಾಲೂಕ ಪಂಚಾಯತ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.