Slide
Slide
Slide
previous arrow
next arrow

ಕ್ರಿಮ್ಸ್ನಲ್ಲಿ ರಾಷ್ಟ್ರೀಯ ನವಜಾತ ಶಿಶುಗಳ ಸಪ್ತಾಹ ಆಚರಣೆ

300x250 AD

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ರಾಷ್ಟ್ರೀಯ ನವಜಾತ ಶಿಶುಗಳ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಸಮಾರಂಭ ಶುಕ್ರವಾರ ನಡೆಯಿತು.
ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ.ಗಜಾನನ ನಾಯಕರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪೋಷಕರಿಗೆ ನವಜಾತ ಶಿಶುಗಳ ಆರೋಗ್ಯದ ಕಾಳಜಿ ಹಾಗೂ ಮುತುವರ್ಜಿ ವಹಿಸಲು ಹಾಗೂ ಕ್ರಿಮ್ಸ್ ಮಕ್ಕಳ ವಿಭಾಗದಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಉಪಯೋಗಿಸಲು ಕೋರಿದರು. ಮಕ್ಕಳ ವಿಭಾಗದ ಎಲ್ಲ ವೈದ್ಯರನ್ನು, ಅವರ ಕರ್ತವ್ಯ ನಿಷ್ಠೆ ಹಾಗೂ ಸೇವೆಯನ್ನು ಹೊಗಳಿ ವಿಭಾಗದ ಬೆಳವಣಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಕ್ಕಳ ಆರೋಗ್ಯ ಸೇವೆಗೆ ಕ್ರಿಮ್ಸ್ ವೈದ್ಯರ ಪಾತ್ರವನ್ನು ಶ್ಲಾಘಿಸಿದರು.
ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್, ತಾಯ್ತನದ ಮಹತ್ವ, ಹೆರಿಗೆ ಪೂರ್ವ ಆರೈಕೆ, ಶಿಶು ಆರೈಕೆ ಹಾಗೂ ಆರೋಗ್ಯವಂತ ಮಗುವಿನ ಗುರಿಗೆ ಪೋಷಕರಿಗೆ ಮಾಹಿತಿ ನೀಡಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಮರೋಳ ಪ್ರಾಸ್ತಾವಿಕ ಮಾತನಾಡಿ, ತಾಯಂದಿರಿಗೆ ನವಜಾತ ಶಿಶು ಆರೋಗ್ಯ ಕಾಪಾಡಿ ಶಿಶುಮರಣ ತಡೆಗಟ್ಟುವ ವಿಧಾನಗಳನ್ನು ವಿವರಿಸಿದರು. ಅಂತರರಾಷ್ಟ್ರೀಯ ಮಕ್ಕಳ ದಿನದ ಘೋಷವಾಕ್ಯ ‘ಸಮಾನತೆ ಹಾಗೂ ಪಾಲ್ಗೊಳ್ಳುವಿಕೆ’ ಹಾಗೂ ರಾಷ್ಟ್ರೀಯ ನವಜಾತ ಶಿಶುಗಳ ಸಪ್ತಾಹ ಘೋಷವಾಕ್ಯ ‘ಸುರಕ್ಷತೆ, ಗುಣಮತ್ತೆ ಮತ್ತು ಪೋಷಣೆ ಎಲ್ಲ ನವಜಾತ ಶಿಶುಗಳ ಹಕ್ಕು’ ಎಂದು ಹೇಳಿದರು. ಕ್ರಿಮ್ಸ್ ಮಕ್ಕಳ ವಿಭಾಗ ದಿಂದ ರೋಗಿಗಳಿಗಾಗುವ ಸೌಲಭ್ಯಗಳು, ಸೇವೆಗಳು ಹಾಗೂ ಸುಧಾರಣೆಗಳನ್ನು ವಿವರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ ನಾಯಕ, ನವಜಾತ ಶಿಶು ಮರಣ ತಡೆಯಲು ಬೇಕಾಗಿರುವ ಎಲ್ಲ ಕ್ರಮಗಳನ್ನು ಪಿಎಚ್‌ಸಿ ಹಾಗೂ ತಾಲೂಕಾ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದೆಂದು ಘೋಷಿಸಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ.ಮಂಜುನಾಥ ಭಟ್, ಡಾ.ವೆಂಕಟೇಶ ಆರ್., ಆರ್ಥಿಕ ಸಲಹೆಗಾರರಾದ ಡಾ.ಆನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗಾಗಿ ಬಾಲ ಕವಿತೆ ಗಾಯನ, ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಪ್ರೋತ್ಸಾಹಿಸಿ ಬಹುಮಾನಗಳನ್ನು ವಿತರಿಸಿದರು. ಹಿರಿಯ ಸ್ಥಾನಿಕ ವೈದ್ಯೆ ಡಾ.ರಕ್ಷಿತಾ ದೇವದಾಸ ಸ್ವಾಗತಗೀತೆ ಹಾಡಿದರು. ಸಹ ಪ್ರಾಧ್ಯಾಪಕರಾದ ಡಾ.ಪವನಕುಮಾರ ಡಿ. ಸ್ವಾಗತ ಭಾಷಣ ಮಾಡಿದರು. ಡಾ.ವಿಜೇತ ರಾಣೆ ವಂದಿಸಿದರು. ಡಾ.ವಿಶ್ವನಾಥ ಮಾಚಕನೂರ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು 100 ಮಕ್ಕಳು ಹಾಗೂ ನವಜಾತ ಶಿಶುಗಳು ಹಾಗೂ ತಾಯಂದಿರು, ಪೋಷಕರು, ದಾದಿಯರು, ಗೃಹವೈದ್ಯರು, ವೈದ್ಯ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top