Slide
Slide
Slide
previous arrow
next arrow

ಇನ್ನು 5 ವರ್ಷದಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ

300x250 AD

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಮೋರ್ಗನ್ ಸ್ಟ್ಯಾನ್‌ಲಿ ವರದಿ ಅಂದಾಜಿಸಿದೆ. ‘Why This Is India’s Decade’ ಎಂಬ ಶೀರ್ಷಿಕೆಯ ವರದಿಯು ದೇಶದ ಆರ್ಥಿಕತೆಯ ಭವಿಷ್ಯವನ್ನು ಚಾಲನೆ ಮಾಡುವ ಪ್ರವೃತ್ತಿಗಳು ಮತ್ತು ನೀತಿಗಳನ್ನು ಒತ್ತಿಹೇಳಿದೆ.

ಪ್ರಸ್ತುತ ಜಿಡಿಪಿ 3.4 ಲಕ್ಷ ಕೋಟಿ ಡಾಲರ್ ಇದ್ದು ಇನ್ನು ಹತ್ತು ವರ್ಷಗಳಲ್ಲಿ ಅದು 8.5 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ ಎಂದು ಅಂದಾಜಿಸಿದೆ. ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, ಕಾರ್ಯಪಡೆಯಲ್ಲಿ ಹೆಚ್ಚಳ, ಡಿಜಿಟಲ್ ಮೂಲ ಸೌಲಭ್ಯದಲ್ಲಿ ಆಗಿರುವ ಅಭಿವೃದ್ಧಿ ಈ ಬೆಳವಣಿಗೆಗಳಿಗೆ ಕಾರಣ ಎಂದು ತಿಳಿಸಿದೆ.

ಸ್ಥಳೀಯ ಮತ್ತು ಜಾಗತಿಕ ಅನುಕೂಲಗಳು ಭಾರತದ ಪ್ರಗತಿಗೆ ಅನುಕೂಲಕರವಾಗಿದೆ. ಪ್ರತಿ ವರ್ಷ ತನ್ನ ಜಿಡಿಪಿಯನ್ನು ಭಾರತ 400 ಶತಕೋಟಿ ಡಾಲರ್ ನಷ್ಟು ಹೆಚ್ಚಿಸಿಕೊಳ್ಳುತ್ತಾ ಹೋಗಲಿದೆ. ಇದು ಚೀನಾ ಮತ್ತು ಅಮೆರಿಕಗಿಂತಲೂ ಹೆಚ್ಚು ಎಂದು ವಿಶ್ಲೇಷಿಸಿದೆ.

ವರದಿಯ ಪ್ರಕಾರ, ಮುಂಬರುವ ದಶಕದಲ್ಲಿ ವರ್ಷಕ್ಕೆ $35,000 ಕ್ಕಿಂತ ಹೆಚ್ಚು ಆದಾಯ ಗಳಿಸುವ ಕುಟುಂಬಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಲಿದೆ. ಭಾರತದ ತಲಾ ಆದಾಯವು 2031 ರಲ್ಲಿ ಪ್ರಸ್ತುತ $2,278 ರಿಂದ $5,242 ಕ್ಕೆ ಏರಲಿದೆ ಎಂದು ವರದಿ ಹೇಳಿದೆ.

300x250 AD

ಕೃಪೆ: http://news13.in

Share This
300x250 AD
300x250 AD
300x250 AD
Back to top