ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ಒಳಪಟ್ಟು ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಕ್ರಿಶ್ಚಿಯನ್ನರಿಗೆ ಭಾರತದ ಪೌರತ್ವ ನೀಡುವ ಅಧಿಕಾರವನ್ನು ಕೇಂದ್ರ ಗೃಹ ಸಚಿವಾಲಯವು 9 ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಆಯಾ ರಾಜ್ಯಗಳ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿದೆ.
1955ರ ಪೌರತ್ವ ಕಾಯ್ದೆಯಡಿಯಲ್ಲಿ ಪೌರತ್ವ ನೀಡೀವ ಅಧಿಕಾರವನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ. ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಪೌರತ್ವ ನೀಡಲು ಅಧಿಕಾರ ಪಡೆದ ರಾಜ್ಯಗಳಾಗಿವೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಹಿಂದೂ, ಬೌದ್ಧ, ಸಿಖ್ ಪಾರ್ಸಿ, ಜೈನ, ಕ್ರೈಸ್ತರಿಗೆ ಪೌರತ್ವ ಸಿಗಲಿದೆ. 2019ರಲ್ಲಿ ಪರಿಚಯಿಸಲಾದ ಹೊಸ ಪೌರತ್ವ ತಿದ್ದುಪಡಿ ಕಾಯ್ದೆಗೆ ಇನ್ನೂ ನಿಯಮಗಳು ರೂಪುಗೊಂಡಿಲ್ಲ, ಈ ಹಿನ್ನಲೆಯಲ್ಲಿ 1955ರ ಸಿಎ ಅಡಿ ಪೌರತ್ವ ನೀಡಲಿದೆ.
ಕೃಪೆ: http://news13.in