ಶಿರಸಿ: ಸರ್ಕಾರದ ನಿಲುವು, ಜನಪ್ರತಿನಿದಿಗಳ ಗಮನಕ್ಕೆ ಬಾರದೇ ಇರುವುದು ತುಂಬಾ ದುರಾದೃಷ್ಟಕರ. ಕಾರಣ ರೈತರಿಗೆ ಅನುಕೂಲವಾಗಲೆಂದು ಬಹಳ ಹಿಂದಿನ ಸರ್ಕಾರ ಕಾಡು ಪ್ರಾಣಿಗಳು, ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ಅಧಿಕೃತ ಲೈಸನ್ಸ್ ಹೊಂದಿದ ಬಂದೂಕುಗಳನ್ನು ರೈತರಿಗೋಸ್ಕರ ಜಾರಿಗೆ ತಂದು ಕೊಟ್ಟದ್ದು ಒಳ್ಳೆಯದು. ಆದರೆ ಈಗ ಹೊಸ ಬಂದೂಕುಗಳಿಗೆ ಲೈಸನ್ಸ್ ಪರ್ಮಿಶನ್ ಸರಕಾರ ಕೊಡುವುದಿಲ್ಲ. ಹಳೇ ಬಂದೂಕು ಲೈಸನ್ಸ್ ಮಿತಿ 70 ವರ್ಷ ಅಂತಾ ಸರ್ಕಾರದ ನಿಲುವು ಸ್ವಾಗತ. ಆದರೆ ಈಗ 70 ವರ್ಷ ಮೇಲ್ಪಟ್ಟವರಿಗೆ ಲೈಸನ್ಸ್ ನವೀಕರಣ ಇಲ್ಲವಾಗಿದ್ದು ಕಣ್ಣು ಕಾಣಲ್ಲ, ಕಿವಿ ಕೇಳಲ್ಲ ಎಂಬ ಉದ್ದೇಶಕ್ಕೆ. ಆದರೂ ಕಣ್ಣು, ಕಿವಿ ಕೇಳುವವರು ಆರೋಗ್ಯವಂತರು ಇದ್ದಾರೆ. ಎಂ.ಬಿ.ಬಿ.ಎಸ್. ಓದಿದ ಡಾಕ್ಟರ್ ಪಿಟ್‌ನೆಸ್ ಸರ್ಟಿಫಿಕೇಟ ಕೊಟ್ಟರೂ ಆರಕ್ಷಕದಳದವರಿಗೆ ಸರಿ ಆಗುವುದಿಲ್ಲ. ಒಂದಲ್ಲಾ ಒಂದು ನೆಪ ಒಡ್ಡುತ್ತಾರೆ. ಎನ್.ಓ.ಸಿ. ಕೊಡುವುದಿಲ್ಲ. ಒಟ್ಟೂ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಲೈಸೆನ್ಸ್ ಬೇಕಾದರೆ ಲೈಸೆನ್ಸ್’ದಾರರಿಗೆ ಅಧಿಕೃತ ಜಮೀನು ಬೇಕು. ಅವಿಭಕ್ತ ಕುಟುಂಬವೇ ಬಹಳ. ಮಕ್ಕಳಿದ್ದರೂ ಮಕ್ಕಳ ಹೆಸರಿಗೆ ಜಮೀನು ವರ್ಗಾವಣೆ ಆಗಿಲ್ಲ. ಜಮೀನು ಇಲ್ಲದವರಿಗೆ, ಲೈಸನ್ಸ್ ಇಲ್ಲ ಎಂಬ ನಿಯಮ ಸರಿ. ಅಪ್ಪನ ಆಸ್ತಿ ಮಕ್ಕಳಿಗೆ ತಾನೇ? ಹಾಗಾಗಿ ಸರ್ಕಾರ ಇಲಾಖೆಗಳು ಗಮನ ಹರಿಸಿ ಬಂದೂಕು ನೌಕರನಾಮ ಅವರ ಮಕ್ಕಳಿಗೆ ಮಾಡಿಕೊಡಬೇಕು. ಮಗನಿಗೆ ಜಮೀನು ಆದಮೇಲೆ ಅಧಿಕೃತ ಲೈಸೆನ್ಸ್ ಕೊಡಲಿ. ಬರೀ ರೈತರಿಗೆ ಅನ್ಯಾಯ ಮಾಡಬೇಡಿ. ಅಲೆದಾಟ, ಕಿರುಕುಳ ಕೊಡುವುದೇ? ಮೋದಿಜೀಯ ಅಚ್ಚೇದಿನ ಇದೇನಾ ? ಇದು ರೈತರ ದೌರ್ಭಾಗ್ಯ. ರೈತರೇ ಬೆನ್ನೆಲಬು ಅಂತಾ ಭಾಷಣ ಬಿಗಿಯುತ್ತಾರೆ. ವೇದಿಕೆ ಇಳಿದ ಮೇಲೆ ರೈತರನ್ನು ಮರೆತೇ ಬಿಡುತ್ತಾರೆ. ಈಗಿನ ಕಾಲದಲ್ಲಿ ಅಡಿಕೆ ಮತ್ತು ಎಲ್ಲಾ ಉಪ ಬೆಳೆಗಳಿಗೆ ಉತ್ತಮ ದರ ಇದ್ದು ಕಳ್ಳಕಾಕರಿಂದ ಮತ್ತು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಬಂದೂಕು ಒಂದೇ ಬ್ರಹ್ಮಾಸ್ತ್ರ. ಹಾಗೆ ಕಾಡು ಪ್ರಾಣಿಗಳು, ಮಿಡಿ ಕಾಯಿಯನ್ನು ಹಾಳುಮಾಡುತ್ತದೆ. ಮಂಗನನ್ನು ಹೊಡಿಬೇಕು ಅಂತ ಅಲ್ಲ. ಬೆದರುಗುಂಡು ಹಾಕಿದರೆ ಸಾಕು ಗದ್ದೆಗಳಲ್ಲಿ ಬೆಳೆದ ಬೆಳೆಗೆ ಬರುವ ಹಂದಿ ಕಾಟಕ್ಕೆ ಹೆದರಿಸಲು ಮತ್ತು ಕಾಡುಪ್ರಾಣಿ ಹೆದರಿಸಲು ಬಂದೂಕಿನ ಗುಂಡಿನ ಶಬ್ದ ಅನುಕೂಲ. ಹಳ್ಳಿಗಳಲ್ಲಿ ಒಂಟಿ ಮನೆಗಳೇ ಜಾಸ್ತಿ ಇರುವುದರಿಂದ ಕಳ್ಳಕಾಕರ ಹಾವಳಿಗೆ ಇದು ಬ್ರಹ್ಮಾಸ್ತ್ರ. ಆದರೆ ಈ ರೀತಿ ನಿಬಂಧನೆ ಸರಿಯೇ? ರೈತ ಬೇಸತ್ತು ಹೋಗಿದ್ದಾನೆ. ಸರ್ಕಾರಿ ಕಚೇರಿ ಎಷ್ಟೇ ಆದರೂ ಅವನಿಗೆ ಹಣ ಪೋಲೇ ಹೊರತು ಕೆಲಸ ಆಗಲ್ಲ. ಸುಲಭದಲ್ಲಿ ಇದ್ದ ಲೈಸೆನ್ಸ್ ಅನ್ನು ಜಮೀನದಾರನ ಮಕ್ಕಳಿಗೆ ಲೈಸೆನ್ಸ್ ವರ್ಗಾವಣೆಯನ್ನು ಘನ ಸರಕಾರ, ಎಂ.ಎಲ್.ಎ.ಗಳು, ಎಂ.ಪಿಗಳು, ರಾಜ್ಯಸಭಾ ಸದಸ್ಯರುಗಳು ಗಮನಿಸಿ ಶೀಘ್ರ ಪರಿಹಾರ ಕೊಡಬೇಕು. ಬಂದೂಕು ಲೈಸೆನ್ಸ್ ಹೊಂದಿದ ಸಾವಿರಾರು ರೈತರ ಕಷ್ಟ ಇದೆ ಆಗಿದೆ. ಸರ್ಕಾರ ಬೇಗ ಸ್ಪಂದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರಕ್ಕೆ ಬಂದೂಕು ನವೀಕರಣ ಸಂಬಂಧಿಸಿ 3 ವರ್ಷಕ್ಕೆ 1500 ರಂತೆ ಇತ್ತು. ಪ್ರಸ್ತುತ 5 ವರ್ಷಕ್ಕೆ 2,500/- ನಿಗದಿಪಡಿಸಿದ್ದಾರೆ. ಇದನ್ನೆಲ್ಲ ರೈತರು ಸರಕಾರಕ್ಕೆ ಭರಿಸಿದ್ದಾರೆ. ಲಕ್ಷಾಂತರ ರೂ. ಲೈಸನ್ಸ್ ಬಂದೂಕು ರಿನಿವಲ್‌ಗೆ ಸರ್ಕಾರಕ್ಕೆ ತುಂಬುತ್ತಾನೆ. ಈ ಎಲ್ಲ ಹಣಗಳು ಸರ್ಕಾರಕ್ಕೆ ಅಲ್ಲವೇ? ಇದೊಂದು ರೀತಿಯಲ್ಲಿ ರೈತರ ಹಣ ಸುಲಿಗೆಯ ಸರಿ. ಆದರೂ ಸರ್ಕಾರದ ನಿಬಂಧನೆಗಳನ್ನು ರೈತರು ಪಾಲಿಸುತ್ತಾ ಇದ್ದಾರೆ. ಇಷ್ಟು ಹಣ ಕಟ್ಟಿದರು ಪೋಲಿಸ್ NOC ಇವೆಲ್ಲಾ ಕಾಗದ ಪತ್ರಗಳೊಳಗೊಂಡು ಡಿಸಿ ಆಫೀಸಿಗೆ ಕಳುಹಿಸಿಕೊಡಬೇಕು. ಇದು ರೈತರಿಗೆ ಕಿರಿಕಿರಿ ಹೊರೆ. ಇಷ್ಟಾದರು ರೈತರು ಈ ಕಾಗದ ಪತ್ರವನೆಲ್ಲಾ ಒದಗಿಸುತ್ತಾರೆ. ಸರ್ಕಾರ ರೈತರಿಗೆ ಸರಳೀಕರಣ ಮಾಡಬೇಕು. ಇದೆಲ್ಲಾ ತಾಲೂಕಿನ ಎಸಿ ಕಛೇರಿಯಲ್ಲಿ ಮಾಡಿಕೊಟ್ಟರೆ ಅನುಕೂಲ. ಚುನಾವಣೆ ಬಂದಾಗ ಎಲ್ಲರೂ ಪೋಲಿಸ ಠಾಣೆಗೆ ತಂದು ಇಡುತ್ತಾರೆ. ಚುನಾವಣೆ ನಂತರ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಿಯಮ ಕಷ್ಟವಾದರೂ ಪಾಲನೆ ಮಾಡುತ್ತಾ ಬಂದಿದ್ದಾರೆ. ಹೀಗಿರುವಾಗ ಜನಪ್ರತಿನಿಧಿಗಳು ಮೌನವಾಗಿರುವುದಕ್ಕೆ ಬೇಸರ. ರೈತರ ಬೆಳೆ ನಷ್ಟವಾದರೂ ಸರ್ಕಾರ ಕೊಡುವುದು ಕವಡೆ ಕಾಸಿನ ಕಿಮ್ಮತ್ತು. 70 ವರ್ಷದ ಒಳಗಡೆ ಇದ್ದವರಿಗೆ ಲೈಸನ್ಸ್ ನವೀಕರಿಸಲು ಅನಗತ್ಯ ಅಲೆದಾಟ ತಪ್ಪಿದ್ದಲ್ಲ. ಅವಧಿ ಮೀರಿದ ಲೈಸೆನ್ಸ್’ದಾರರ ಮಕ್ಕಳಿಗೆ ರಿನಿವಲ್ ಮಾಡಿ ನೌಕರನಾಮಿ ಕೊಟ್ಟರೆ ರೈತರಿಗೆ ಅನೂಕೂಲ ಎಷ್ಟೋ ಬೆಳೆ ರಕ್ಷಣೆ ಆಗುತ್ತದೆ, ಬೆಳೆದ ಬೆಳೆಗಳನ್ನು ರೈತನೊಬ್ಬನೇ ತಿನ್ನುವುದಿಲ್ಲ, ಸರ್ಕಾರಕ್ಕೆ ಪ್ರಜೆಗಳಿಗೆ ಅನ್ನ ನೀಡುತ್ತಾನೆ. ಆದ್ದರಿಂದ ಬೆಳೆ ರಕ್ಷಣೆಗಿರುವ ಕಳ್ಳಕಾಕರ ರಕ್ಷಣೆಗಿರುವ ಹಳ್ಳಿಗಾಡಿನ ಕಾನನ ಮಧ್ಯೆ ಇರುವ ಒಂಟಿ ಮನೆಗೆ ಇದ್ದ ಬಂದೂಕು ಎನ್ನುವ ಅಸ್ತ್ರವನ್ನು ರೈತರಿಂದ ದಯವಿಟ್ಟು ಕಿತ್ತುಕೊಳ್ಳಬೇಡಿ. ಇದರಿಂದ ಸರ್ಕಾರಕ್ಕೆ ಲಾಭವೇ ಹೊರತು ನಷ್ಟವಿಲ್ಲ. ಆದರೂ ರೈತರಿಗೆ ಏಕೆ ಅನ್ಯಾಯಮಾಡುತ್ತೀರಿ ? ಎಲ್ಲಾ ರೈತರ ಪರವಾಗಿ ನನ್ನ ವಿಜ್ಞಾಪನೆ ಶೀಘ್ರ ಬಗೆಹರಿಸುತ್ತೀರಿ ಎನ್ನುವ ಆಶಯದೊಂದಿಗೆ,
ಗಂಗಾಧರ ಮಾಬ್ಲೇಶ್ವರ ಹೆಗಡೆ, ಯಕ್ಷಗಾನ ಕಲಾವಿದ, ರೈತ
ಗಣೇಶಪಾಲ್ ಕಟ್ಟಿನಹಕಲು,
ಶಿರಸಿ ಮೋ. ನಂ: 9482114293