ಯಲ್ಲಾಪುರ: ಕಳೆದ ಹದಿನೇಳು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ ಪಾಟೀಲ ಇಲೇಕ್ಟ್ರೀಕಲ್ಸ ಮಾಲಿಕರಾದ ವಿನೋದ ಪಾಟೀಲ (48) ನಿಧನರಾಗಿದ್ದಾರೆ.
ಅಲ್ಪ ಕಾಲಿಕ ಅನಾರೋಗ್ಯಕ್ಕೆ ಈಡಾಗಿದ್ದ ವಿನೋದ ಪಾಟೀಲ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಬೆಳಿಗ್ಗೆ ನಿಧನರಾದರು. ಸದಾ ಕ್ರಿಯಾಶೀಲರಾಗಿರುತ್ತಿದ್ದ ವಿನೋದ ಪಾಟೀಲ, ಜಾತ್ರೆ, ಅದರಲ್ಲಿಯೂ ಗಣೇಶ ಹಬ್ಬದಂದು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ತೆಲಗೇರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದ ಗಣೇಶ ಮೂರ್ತಿ ಹಾಗೂ ಮಂಟಪದ ಆಕರ್ಷಣೀಯವಾಗಿ ನಿರ್ಮಾಣ ಮಾಡುತ್ತಿದ್ದವರಲ್ಲಿ ವಿನೋದ ಪಾಟೀಲ ಪ್ರಮುಖರಾಗಿದ್ದರು. ಮೃತರು ಪತ್ನಿ, ತಂದೆ, ತಾಯಿ, ತಂಗಿ, ತಮ್ಮ, ಅಪಾರ ಬಂದು ಬಳಗ ಹಾಗ ಮಿತ್ರರನ್ನು ಅಗಲಿದ್ದಾರೆ.
ಸಚಿವರಾದ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಉದ್ಯಮಿ ಬಾಲಕೃಷ್ಣ ನಾಯಕ, ಪ.ಪಂ ಮಾಜಿ ಅಧ್ಯಕ್ಷ ಶಿರೀಶ ಪ್ರಭು, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಸಿ.ರಮೇಶ, ಕಾರ್ಯದರ್ಶಿಯಾದ ಚಂದ್ರಬಾಬು,ಕನ್ನಡ ಕ್ರೀಯಾ ಸಮಿತಿ ಚೇರ್ಮನ್ ವೇಣುಗೋಪಾಲ ಮದ್ಗುಣಿ, ವಿನೋದ ಪಾಟೀಲ್ ಮಿತ್ರರಾದ ಅಣ್ಣಪ್ಪ ಪಾಟೀಲ್, ವಿನು ನಾಯ್ಕ, ನೀಲಕಂಠ ನಾಯ್ಕ, ಸಂತೋಷ ಕಮ್ಮರ, ಮಾರುತಿ ನಾಯ್ಕ, ನಾರಾಯಣ ಮರಾಟೆ, ಮಹೇಶ ಆಲಮಠ, ಬಿ ಸತ್ಯನ್, ಪ್ರಪುಲ್ ಕುದಳೆ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.