ಹೊನ್ನಾವರ: ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ ಅವರ ಯಕ್ಷಪಯಣದ 15ನೇ ವರ್ಷದ ನಿಮಿತ್ತ ನ.10ರಂದು ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮ ರಾತ್ರಿ 8:30ಕ್ಕೆ ಹೊಸಪಟ್ಟಣದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದ ಚಂದ್ರಹಾಸ ಗೌಡ ಮಾಹಿತಿ ನೀಡಿದರು.
ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹಾಗೂ ರಾಜೇಶ ಭಂಡಾರಿ ಸಹಯೋಗ, ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದರ ಸಮ್ಮಿಲನದಿಂದ ಯಕ್ಷಗಾನ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ಶ್ರೀ ನಿಶ್ಚಲನಂದನಾಥ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ‘ಹೊಸಪಟ್ಟಣ ಯಕ್ಷಯಾನ ಯಕ್ಷಚಂದ್ರ ಪಂಚದಶೀ’ ಎನ್ನುವ ಶೀರ್ಷಿಕೆಯಡಿ ‘ಪಂಚಾಕ್ಷರ ಪಾರಮ್ಯ’ ಎನ್ನುವ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮದ್ದಳೆ ಮಾಂತ್ರಿಕ ಪರಮೇಶ್ವರ ಭಂಡಾರಿ ಕರ್ಕಿ ಇವರ 5 ಮದ್ದಳೆಯ ವಾದನ, ಚಂಡೆಯ ಗಂಡುಗಲಿ ಶಿವಾನಂದ ಕೋಟ ಮತ್ತು ಸುಬ್ರಹ್ಮಣ್ಯ ಭಂಡಾರಿ ಇವರಿಂದ ಚಂಡೆಯ ಜುಗಲ್ಬಂದಿ, ಹಾಸ್ಯ ಚಕ್ರವರ್ತಿ ರಮೇಶ ಭಂಡಾರಿ, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಎಂದೆ ಬಿರುದಾಂಕಿತರಾದ ಸೀತಾರಮ ಕಟೀಲ್ ಹಾಗೂ ಶ್ರೀಧರ ಹೆಗಡೆ ಕಾಸರಕೋಡ ಇವರ ಹಾಸ್ಯ ವಿಶೇಷ ಆಕರ್ಷಣೆಯಾಗಿದೆ. ಕಾರ್ಯಕ್ರಮದಲ್ಲಿ ಚಂದ್ರಹಾಸ ಗೌಡ ಇವರ ಯಕ್ಷಗಾನದ ಆರಂಭದಲ್ಲಿ ಪೊತ್ಸಾಹಿಸಿದವರನ್ನು ಹಾಗೂ ಊರಿನ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ಶಂಕರ ಗೌಡ ಗುಣವಂತೆ ಮಾತನಾಡಿ, ಯಕ್ಷಗಾನದ ಮೂಲಕ ಪ್ರತಿ ಬಾರಿಯು ಹೊಸತನವನ್ನು ತೋರಿಸುವ ಕಲಾವಿದರಾಗಿದ್ದಾರೆ. 15 ವರ್ಷಗಳ ಯಶ್ವಸಿ ಪ್ರದರ್ಶಿಸಿದ ಯುವ ಕಲಾವಿದರಿಂದ ಸನ್ಮಾನ ಕಾರ್ಯಕ್ರಮ ಇತರರಿಗೆ ಪ್ರೆರಣೆಯಾಗಿದೆ. ಕಲೆ ಹಾಗೂಕಲಾವಿದರನ್ನು ನಾವೆಲ್ಲರೂ ಪೊತ್ಸಾಹಿಸುವ ಕಾರ್ಯ ಮಾಡೋಣ ಎಂದರು.
ನಿವೃತ್ತ ಸೈನಿಕ ತಿಮ್ಮಪ್ಪ ಗೌಡ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಲೆಯಾದ ಯಕ್ಷಗಾನವಾಗಿದೆ. ಇಂತಹ ಕಲೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಯುವಕರು ಮುಂದಾಗಬೇಕಿದ್ಧು, ಅಂತಹ ಯುವ ಕಲಾವಿದರ ಸಾಧನೆಯ ಪ್ರೇರಣೆಯಾಗಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಲಾಭಿಮಾನಿಗಳು ಆಗಮಿಸುವಂತೆ ಕೋರಿದರು.
ಪತ್ರಿಕಾಗೊಷ್ಟಿಯಲ್ಲಿ ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಗೌಡ, ಯಕ್ಷಗಾನ ಕಲಾವಿದರಾದ ನಾಗೇಶ ಗೌಡ, ಸುಬ್ರಹ್ಮಣ್ಯ ಗೌಡ, ಹೊಸಪಟ್ಟಣದ ನಾರಾಯಣ ಗೌಡ ಉಪಸ್ಥಿತರಿದ್ದರು.