ಯಲ್ಲಾಪುರ: ತಾಲೂಕಿನ ಚಿನ್ನಾಪುರ ಮೇಲ್ತರ್ಪು ಸೀಮೆಯ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭವು ಮಾವಿನಮನೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಂತೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಮಾತೃ ಮಂಡಳದ ಮಹಿಳಾ ಸಂಚಾಲಕಿಯಾದ ಪಾರ್ವತಿ ಹೆಗಡೆ, ಸಂಚಾಲಕರಾದ ಪರಮೇಶ್ವರ ಹೆಗಡೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸವಿತಾ .ಎಸ್.ಜಿ., ಸಹ ಶಿಕ್ಷಕಿಯಾದ ಪ್ರತಿಮಾ ಕೋಮಾರ ಈರಾಪುರ, ಗ್ರಾಮದ ಪ್ರಮುಖರಾದ ಮಾನಸಾ ಹೆಗಡೆ, ಲಲೀತಾ ಹೆಗಡೆ, ಗೀತಾ ಹೆಗಡೆ, ಗೌರಿ ಹೆಗಡೆ, ಗಣೇಶ ಗೌಡ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಭಗವದ್ಗೀತೆಯ 5 ನೇ ಅಧ್ಯಾಯವನ್ನು ಪಠಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಮಾವಿನಮನೆ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನದ ಉದ್ಘಾಟನೆ
