Slide
Slide
Slide
previous arrow
next arrow

ಜೀವನದ ಜಟಿಲ ಸಮಸ್ಯೆ ಎದುರಿಸಲು ಗೀತೆ ಸಹಾಯಕಾರಿ :ಸಚ್ಚಿದಾನಂದ ಶ್ರೀ

300x250 AD

ಹೊನ್ನಾವರ; ಭಗವದ್ಗೀತೆಯು ಜೀವನದ ಜಟಿಲ ಸಮಸ್ಯೆ ಎದುರಿಸಲು ಆತ್ಮಸೈರ್ಯ ಮೂಡಿಸುತ್ತದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿಯವರು ಹೇಳಿದರು.

ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ಭಗವದ್ಗೀತಾ ಅಭಿಯಾನಕ್ಕೆ ಶುಕ್ರವಾರ ಸ್ವಾಮೀಜಿಯವರು ಚಾಲನೆ ನೀಡಿದರು.
ನಂತರ ಆರ್ಶಿವಚನ ನೀಡಿ ಇಂದಿನ ಯುವಪೀಳಿಗೆಯು ಆತುರ ನಿರ್ಧಾರದಿಂದ ಹಲವು ಅನಾಹುತಗಳು ಸಂಭವಿಸುತ್ತದೆ. ತಾಳ್ಮೆ ಹಾಗೂ ಅನುಭವದ ಕೊರತೆ ನಿವಾರಿಸಲು ಭಗವದ್ಗೀತೆಯು ಪ್ರೇರಣೆಯಾಗಲಿದೆ. ಪ್ರತಿಯೊರ್ವರು ಇದರ ಅಧ್ಯಯನ ಮಾಡಬೇಕು. ಯಾವುದೇ ಒಂದು ಜಾತಿ ಮತಕ್ಕೆ ಸೀಮೀತವಾಗಿಲ್ಲ. ಅದಕ್ಕಾಗಿ ತಾಲೂಕಿನ 50 ಕ್ಕೂ ಅಧಿಕ ಕೇಂದ್ರದಲ್ಲಿ ಅಭಿಯಾನದ ರೂಪದಲ್ಲಿ ಇದನ್ನು ಅಧ್ಯಯನ ಆರಂಭಿಸಲಾಗಿದೆ. ಗೀತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಅಭಿಯಾನದ ರೂಪದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ 16 ವರ್ಷದಿಂದ ನಡೆಯುತ್ತಿದ್ದು, ಈ ಬಾರಿಯು ಒಂದು ತಿಂಗಳ ಕಾಲ ಇದರ ಅಭಿಯಾನ ನಡೆಯಲಿದೆ. ಪ್ರತಿಯೊರ್ವರ ಮನೆ ಹಾಗೂ ಮನಗಳಲ್ಲಿ ಈ ಗೀತೆಯು ಅಚ್ಚಳಿಯದೇ ಉಳಿಯಲು ಇಂತಹ ಅಭಿಯಾನ ಪೂರಕವಾಗಲಿದೆ ಎಂದರು

ಉದ್ಯಮಿ ಜೆ.ಟಿ.ಪೈ ಮಾತನಾಡಿ ಭಗವದ್ಗೀತೆಯ 18 ಅಧ್ಯಾಯವನ್ನು ಮೂರು ಭಾಗವಾಗಿ ವಿಂಗಡಿಸಿದ್ದು, ಪ್ರತಿ ಬಾರಿಯು ಒದೊಂದು ಅಧ್ಯಾಯ ಪಠಣ ಮಾಡಿ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಶ್ಲೋಕ ಪಠಣದ ಜೊತೆ ಇದರ ಅರ್ಥವನ್ನು ಅರಿತು. ಅದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಇದು ಸಜ್ಜನ ವ್ಯಕ್ತಿಗಳಾಗಿ ಬೆಳೆಯಲು ಮಹತ್ತರವಾದ ಪಾತ್ರ ವಹಿಸಲಿದೆ ಎಂದು ಗೀತೆಯ ಮಹತ್ವವನ್ನು ವಿವರಿಸಿದರು.

300x250 AD

ವೇದಿಕೆಯಲ್ಲಿ ಅಭಿಯಾನದ ಯಶ್ವಸಿಗೆ ಕಾರಣರಾದ ಸೀತಾರಾಮ ನಾಯ್ಕ, ಎಂ.ಡಿ.ನಾಯ್ಕ ನಿಕಟಪೂರ್ವ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಉಮೇಶ ನಾಯ್ಕ, ರಾಜೇಶ ಸಾಲೆಹಿತ್ತಲ್, ಲೋಕೇಶ ಮೇಸ್ತ, ದಾಮೋದರ ನಾಯ್ಕ, ಅಣ್ಣಪ್ಪ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.
ಸತ್ಯನಾರಾಯಣ ಭಟ್ ಸ್ವಾಗತಿಸಿದರೆ, ಸಂಜು ಶೇಟ್ ವಂದಿಸಿದರು. ನಿವೃತ್ತ ಉಪನ್ಯಾಸಕರಾದ ಡಾ.ಜಿ.ಪಿ ಪಾಠನಕರ್ ಕಾರ್ಯಕ್ರಮ ನಿರ್ವಹಿಸಿದರು

Share This
300x250 AD
300x250 AD
300x250 AD
Back to top