Slide
Slide
Slide
previous arrow
next arrow

ಇಲೆಕ್ಟ್ರಾನಿಕ್ ವಸ್ತುಗಳ ಸರ್ವಿಸ್ ಮತ್ತು ರಿಪೇರ್ ತರಬೇತಿ

300x250 AD

ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆ ವತಿಯಿಂದ 30 ದಿನಗಳ ಎಲ್. ಸಿ. ಡಿ, ಎಲ್. ಇ. ಡಿ, 4k ಟಿವಿ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳ ಸರ್ವಿಸ್ ಮತ್ತು ರಿಪೇರ್ ದುರಸ್ತಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತ18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ನವೆಂಬರ್ 25ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ತರಬೇತಿಯು ಇದೆ ನವೆಂಬರ್ 28 ರಿಂದ ಪ್ರಾರಂಭವಾಗಲಿದೆ.

ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ , ಸಾಫ್ಟ್ ಸ್ಟೀಲ್ಸ್, ಯೋಗ ತರಬೇತಿ ಹಾಗೂ
ಬ್ಯಾಂಕಿಂಗ್ , ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಕುರಿತು ಉಚಿತವಾಗಿ ಮಾಹಿತಿ ನೀಡಲಾಗುವುದು.

300x250 AD

ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ವಿಳಾಸಕ್ಕೆ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ 9482188780, 9483485489, 08284-295307, ಗೆ ಸಂಪರ್ಕಿಸಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top