ಶಿರಸಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಸಮಾಜದ ಮೂಲ ಪುರುಷರಾದ ಸಹಸ್ರಾರ್ಜುನ್ ಮಹಾರಾಜರ ಜಯಂತಿಯನ್ನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಗುರುನಾಥ್ ಕಲಬುರ್ಗಿ ಮಾತನಾಡಿ, ಸಮಾಜದ ಎಲ್ಲ ಬಾಂಧವರು ಎಲ್ಲ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಾಗಿ ಹುಮ್ಮಸ್ಸಿನಿಂದ ಕೆಲಸವನ್ನು ಮಾಡಿದ್ದಾರೆ. ಇದರಿಂದ ಸಂಘಟನೆಗೆ ಬಲ ಬಂದಿದೆ. ಸಮಾಜ ಉನ್ನತಿ ಹೊಂದಿದಾಗ ದೇಶ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ ಎಂದರು.
ನವರಾತ್ರಿ ಉತ್ಸವದ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಸಾಧನೆ ಮಾಡಿದ ಹಾಗೂ ಉನ್ನತ ಪದವಿ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅಶೋಕ್ ಹಬೀಬ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಸಮಾಜದ ಕಾರ್ಯದರ್ಶಿ ಲಕ್ಷ್ಮಣ ಕಲಬುರ್ಗಿ ವಂದಿಸಿದರು. ಖಜಾಂಚಿ ಶ್ರೀನಿವಾಸ್ ಬಾಕಳೆ ವರದಿ ವಾಚಿಸಿದರು. ಸಮಾಜದ ಪ್ರಮುಖರಾದ ರುಕ್ಮಸಾ ಲದ್ವಾ, ನಾಗರಾಜ್ ಕಲಬುರ್ಗಿ, ನಾರಾಯಣ ರಾಯಭಾಗಿ ಮುಂತಾದವರು ಪಾಲ್ಗೊಂಡಿದ್ದರು.