Slide
Slide
Slide
previous arrow
next arrow

ಜೊಯಿಡಾದಲ್ಲಿ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ

300x250 AD

ಜೊಯಿಡಾ: ತಾಲೂಕಿನ ಕುಣಬಿ ಭವನದಲ್ಲಿ ಪ್ರಾರಂಭವಾಗಿ ತಹಶೀಲ್ದಾರ ಕಚೇರಿಯವರೆಗೆ ಕುಣಬಿ ಸಮಾಜ ಮತ್ತು ಕಾಳಿ ಬ್ರಿಗೇಡ್, ವಿವಿಧ ಸಂಘಟನೆಗಳಿಂದಅರಣ್ಯ ಇಲಾಖೆಯ ಪ್ಯಾಕೇಜ್ ಹಾಗೂ ಇನ್ನೀತರ ಸಮಸ್ಯೆ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನತೆ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಆರ್.ವಿ.ದೇಶಪಾಂಡೆ, ತಾಲೂಕಿನ ಜನರಿಗೆ ಅರಣ್ಯ ಇಲಾಕೆಯಿಂದ ಯಾವುದೇ ಅನ್ಯಾಯ ಆಗದಂತೆ ನಾನು ಜನರ ಜೊತೆ ಇರುತ್ತೇನೆ. ತಾಲೂಕಿನ ಜನರು ಕಾಡನ್ನು ಎಂದು ನಾಶ ಮಾಡಿಲ್ಲ, ಮರಗಿಡಗಳನ್ನು ದೇವರಂತೆ ಪೂಜಿಸಿದ್ದಾರೆ, ಇಲ್ಲಿಯ ಜನರಿಗೆ ಅನ್ಯಾಯ ಆಗಬಾರದು. ತಾಲೂಕಿನ ಅಭಿವೃದ್ಧಿಗೆ ಅರಣ್ಯ ಇಲಾಕೆ ಅಡ್ಡಗಾಲು ಹಾಕುತ್ತಿರುವುದು ಬೇಸರದ ಸಂಘತಿ, ಎಲ್ಲಾ ಕೆಲಸ ಕಾರ್ಯಗಳಿಗೂ ಅಡ್ಡಿ ಮಾಡಿದರೆ ತಾಲೂಕಿನ ಜನರು ಬದುಕುವುದು ಹೇಗೆ ಎಂದರು.

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಅರಣ್ಯ ಇಲಾಕೆ ಅಧಿಕಾರಿಗಳು ಜೋಯಿಡಾ ತಾಲೂಕಿನಲ್ಲಿ ಜನರು ಬದುಕುವುದೇ ಬೇಡ ಎಂಬ ನಿರ್ಧಾರ ಮಾಡಿದಂತೆ ಅನಿಸುತ್ತದೆ. ಅರಣ್ಯ ಇಲಾಖೆ ಕಟ್ಟಡ ಕಟ್ಟಬಹುದು,ತಮಗೆ ಬೇಕಾದಲ್ಲಿ ರಸ್ತೆ ಮಾಡಬಹುದು, ತಮಗೆ ಬೇಕಾದ ಎಲ್ಲಾ ಅಭಿವೃದ್ಧಿ ಕೆಲಸ ಮಾಡಬಹುದು, ಆದರೆ ಜನರಿಗೆ ಬೇಕಾದ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಕೆ ತೊಂದರೆ ನೀಡುತ್ತಿದೆ, ಅರಣ್ಯ ಇಲಾಖೆಗೆ ಒಂದು ನ್ಯಾಯ ,ಜನರಿಗೆ ಒಂದು ನ್ಯಾಯ ಎಂಬತಾಗಿದೆ, ನೀವು 15 ಲಕ್ಷ ಪ್ಯಾಕೇಜ್ ನೀಡಿ ಇಲ್ಲಿನ ಜನರನ್ನು ಓಡಿಸುವ ನಿರ್ಧಾರ ಮಾಡಿದ್ದಿರಿ, ನಾವೇ ನಿಮಗೆ 30 ಲಕ್ಷ ಕೊಡತ್ತೇವೆ ನೀವು ಜೊಯಿಡಾ ತಾಲೂಕನ್ನು ಬಿಟ್ಟು ಹೋಗಿ, ನಮ್ಮ ರೈತರ ಜಮೀನಿಗೆ ಕಾಲಿಡುವಾಗ ಎಚ್ಚರಿಕೆಗಳನ್ನು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಣಬಿ ಸಮಾಜದ ಅಧ್ಯಕ್ಷ ಅಜಿತ ಮಿರಾಶಿಅರಣ್ಯ ಇಲಾಖೆಗೆ ಧಿಕ್ಕಾರ, ಇಲ್ಲಿರುವ ಎನ್.ಜಿ.ಓಗಳನ್ನು ಬ್ಯಾನ್ ಮಾಡಬೇಕು, ನಮ್ಮ ಮೇಲೆ ಅರಣ್ಯ ಇಲಾಕೆ ದಬ್ಬಾಳಿಕೆ ಮಾಡುತ್ತಿದೆ, ರಾತ್ರಿಯಾಗುತ್ತಿದ್ದಂತೆ ಗೇಟ್‌ಗಳನ್ನು ಹಾಕಲಾಗುತ್ತದೆ, ನಮ್ಮ ಸ್ನೇಹಿತರು ,ನೆಂಟರು ನಮ್ಮ ಮನೆಗಳಿಗೆ ಬರಲು ಬಿಡುವುದಿಲ್ಲ, ನಮ್ಮನ್ನು ನಕ್ಸಲ್ ಟೆರೆರಿಸ್ಟಗಳಂತೆ ನೋಡಲಾಗುತ್ತಿದೆ, ಇದು ನಿಲ್ಲಬೇಕು, ನಮ್ಮ ತಾಲೂಕನ್ನು ಅರಣ್ಯ ಇಲಾಖೆಯಿಂದ ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಮಾರಿಯೋ ಕ್ರಿಸ್ತರಾಜ್, ನಮ್ಮ ಇಲಾಖೆ ಅಡಿಯಲ್ಲಿ ಮಾಡಿಕೊಡಬಹುದಾದ ಎಲ್ಲಾ ಸಹಕಾರ ನಾವು ನೀಡಿದ್ದೇವೆ, ಪ್ಯಾಕೇಜ್ ಯಾರಿಗೆ ಬೇಕು ಅವರು ಸ್ವತಃ ಕೇಳಿದಾಗ ಮಾತ್ರ ಅಂತವರಿಗೆ ನಾವು ಪ್ಯಾಕೇಜ್ ನೀಡಿದ್ದೇವೆ ಎಂದರು.

300x250 AD

ಕೊನೆಗೂ ಎಲ್ಲಾ ರಾಜಕೀಯ ಮುಖಂಡರು, ಪ್ರತಿಭಟನಾಕಾರರ ಮುಖ್ಯಸ್ಥರು ಹಾಗೂ ಅರಣ್ಯ ಇಲಾಕೆ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಸಭೆ ನಡೆದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಕಾಳಿ ಬ್ರಿಗೇಡ್‌ನ ರವಿ ರೆಡ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಬಿಜೆಪಿ ಅಧ್ಯಕ್ಷ ಸಂತೋಷ ರೆಡ್ಕರ್, ಜೊಯಿಡಾ ಗ್ರಾ.ಪಂ. ಅಧ್ಯಕ್ಷ ಅರುಣ ಕಾಂಬ್ರೆಕರ, ಗಣ್ಯರಾಜ ನಾಯ್ಕ, ಸಂಜಯ ಹಣಬರ, ತಹಶೀಲ್ದಾರ ಶೈಲೇಶ ಪರಮಾನಂದ ಇತರರು ಇದ್ದರು. ಸಿಪಿಐ ನಿತ್ಯಾನಂದ ಪಂಡಿತ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿಭಟನೆಯಲ್ಲಿ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಶಾಸಕ ಸುನೀಲ್ ಹೆಡಗೆ ಭಾಗವಹಿಸಿ ಪ್ರತಿಭಟನಾಕಾರರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರಲ್ಲದೆ, ಒಬ್ಬರ ಮಾತಿಗೆ ಮತ್ತೋಬ್ಬರು ತಲೆ ಅಲ್ಲಾಡಿಸಿ ಇಬ್ಬರು ಜನರ ಜೊತೆಗೆ ಇದ್ದೇವೆ ಎಂಬುದು ಕಾಣುವಂತಿತ್ತು.

Share This
300x250 AD
300x250 AD
300x250 AD
Back to top