ಅಂಕೋಲಾ: ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ಅಂಕೋಲಾ ತಾಲೂಕು ಆರನೇ ಸ್ಥಾನದಲ್ಲಿದ್ದರೂ ಕೂಡ ಪ್ರಪ್ರಥಮವಾಗಿ ಅಂಕೋಲಾದಲ್ಲಿ ನಾಮಧಾರಿ ಸಭಾಭವನ ನಿರ್ಮಾಣಗೊಂಡಿತ್ತು. ಆರಂಭದಲ್ಲಿ ಸಾಕಷ್ಟು ಅಡೆತಡೆಗಳು ಬಂದರೂ ಅದನ್ನು ನಿಭಾಯಿಸಿ ಇಂದಿಗೆ ಸುಸಜ್ಜಿತ ಸಭಾಭವನವನ್ನಾಗಿ ನಿರ್ಮಿಸಲಾಗಿದೆ ಎಂದು ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಬುಧವಾರ ನಡೆದ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾಮಧಾರಿ ಸಮಾಜದ ಸಭಾಭವನ ಅತ್ಯುತ್ತಮ ರೀತಿಯಲ್ಲಿ ನಿರ್ಮಾಣಗೊಳ್ಳುವುದರ ಜೊತೆಗೆ ಪ್ರತಿವರ್ಷ ಗಣೇಶೋತ್ಸವ ಕೂಡ ಆಚರಣೆ ಮಾಡಲಾಗುತ್ತಿದೆ. ಜನ ಹೆಮ್ಮೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ಮುಂದಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೇಮಕಗೊಳ್ಳುವವರು ಉತ್ತಮ ರೀತಿಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಲಿ ಎಂದರು.
ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಸಮಾಜದ ಸಂಘಟನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗೆಶ ನಾಯ್ಕ, ಬಾಲಕೃಷ್ಣ ನಾಯ್ಕ, ಮೋಹನ ನಾಯ್ಕ, ರಾಜೇಶ ಮಿತ್ರಾ ನಾಯ್ಕ, ಉಮೇಶ ನಾಯ್ಕ, ಉದಯ ನಾಯ್ಕ, ಉಪೇಂದ್ರ ನಾಯ್ಕ, ಎಂ.ಪಿ. ನಾಯ್ಕ, ಏಕನಾಥ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ಮಂಜುನಾಥ ಡಿ. ನಾಯ್ಕ, ಮುರ್ಕುಂಡಿ ನಾಯ್ಕ, ಸಂಜಯ ನಾಯ್ಕ, ಗಣೇಶ ನಾಯ್ಕ, ಕುಮಾರ ನಾಯ್ಕ, ರವಿ ಎ. ನಾಯ್ಕ, ಗಜಾನನ ನಾಯ್ಕ, ಅಶೋಕ ನಾಯ್ಕ, ಮಂಜುನಾಥ ವಿ. ನಾಯ್ಕ, ಶ್ರೀಧರ ನಾಯ್ಕ, ರಮೇಶ ನಾಯ್ಕ, ಸುರೇಶ ನಾಯ್ಕ, ವೆಂಕಟ್ರಮಣ ನಾಯ್ಕ, ನಾಗೇಂದ್ರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.