Slide
Slide
Slide
previous arrow
next arrow

ಸ್ವಂತ ಖರ್ಚಿನಿಂದ ನಿರ್ಗತಿಕ ಮಹಿಳೆಯೋರ್ವಳಿಗೆ ಮನೆ ನಿರ್ಮಿಸಿಕೊಟ್ಟ ಪ್ರದೀಪ ನಾಯಕ

300x250 AD

ಕುಮಟಾ: ತಾಲೂಕಿನ ಹಿರೇಗುತ್ತಿಯ ನಿರ್ಗತಿಕ ಮಹಿಳೆಯೋರ್ವಳಿಗೆ ಜಿಪಂ ನಿಕಟಪೂರ್ವ ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ತಮ್ಮ ಸ್ವಂತ ಖರ್ಚಿನಿಂದ ಮನೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹಿರೇಗುತ್ತಿಯ ನಿರ್ಗತಿಕ ಮಹಿಳೆ ಶುಶೀಲಾ ಮೋಹನ ಹರಿಕಾಂತ ಅವರು ಬಹಳ ಕಷ್ಟದಲ್ಲಿ ಕಟುಂಬದ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಪತಿಯನ್ನು ಕಳೆದುಕೊಂಡ ಇವರು, ಮೂರು ಗಂಡು ಮಕ್ಕಳ ಪೋಷಣೆ ಜೊತೆಗೆ ವೃದ್ಧ ಅಂಧ ತಾಯಿಯ ಆರೈಕೆ ಮಾಡುವ ಜೊತೆಗೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾಳೆ. ಅವರ ಹಳೆಯ ಮನೆಯ ಮಣ್ಣು ಗೋಡೆ ಕುಸಿದು ಬಿದ್ದಿದ್ದು, ಸಮರ್ಪಕ ಸೂರಿನ ವ್ಯವಸ್ಥೆಯಿಲ್ಲದೇ ಅವರ ಕುಟುಂಬದ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಈ ಬಡ ಮಹಿಳೆಯ ಸಹಾಯಕ್ಕೆ ಸರ್ಕಾರವಾಗಲಿ, ಗ್ರಾಪಂ ಅಧಿಕಾರಿಗಳಾಗಲಿ ಬಂದಿರಲಿಲ್ಲ.
ಕಳೆದ ಕೋವಿಡ್ ಸಂದರ್ಭದಲ್ಲಿ ಆ ಭಾಗದ ಜನರಿಗೆ ನೆರವು ನೀಡಲು ಆಗ ಜಿಪಂ ಸದಸ್ಯರಾಗಿದ್ದ ಪ್ರದೀಪ ನಾಯಕ ಅವರು ತೆರಳಿದಾಗ, ಶುಶೀಲಾ ಅವರ ಕಷ್ಟದ ಸ್ಥಿತಿ ನೋಡಿ ಮರುಕಪಟ್ಟಿದ್ದರು. ಪಂಚಾಯತ್‌ನಿಂದ ಮನೆ ಮಂಜೂರಿ ಮಾಡಿಸಿಕೊಡುವ ಭರವಸೆ ನೀಡಿದ್ದರು. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದ ಮನೆ ಮಂಜೂರಾಗದ ಕಾರಣ ಸ್ವಂತ ಖರ್ಚಿನಿಂದಲೇ ಆ ಬಡ ಮಹಿಳೆಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು. ಅಲ್ಲದೇ ಅಲ್ಲಿನ ಸ್ಥಳೀಯರು ಆ ಬಡ ಕುಡುಂಬಕ್ಕೆ ಮನೆಯಿಲ್ಲದ ಕಾರಣ ಆಕೆಯು ರಾತ್ರಿ ಹೊತ್ತಿನಲ್ಲಿ ಸ್ನಾನ ಮಾಡುವ ಸಂದಿಗ್ದ ಪರಿಸ್ಥಿತಿಯಲ್ಲಿರುವ ಬಗ್ಗೆ ತಿಳಿಸಿ, ಅತೀ ಶೀಘ್ರವಾಗಿ ಮನೆ ನಿರ್ಮಿಸಿ ಕೊಡುವಂತೆ ಪ್ರದೀಪ ನಾಯಕರ ಬಳಿ ಮನವಿ ಮಾಡಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಪ್ರದೀಪ ನಾಯಕ ಅವರು ಆ ಬಡ ಮಹಿಳೆಗೆ ಸೂರೊಂದನ್ನು ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಲ್ಲದೇ ಆ ಮನೆಯನ್ನು ಪ್ರದೀಪ ನಾಯಕ ಅವರೇ ಉದ್ಘಾಟಿಸಿ, ಮನೆಗೆ ಅಗತ್ಯವಾದ ಖುರ್ಚಿ, ಮೇಜು ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ ನಾಯಕರು, ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಧ್ವನಿಯಾಗಬೇಕೆ ಹೊರತು ಚುನಾವಣೆ ಬಂದಾಗ ಮಾತ್ರ ಅವರ ಬಳಿ ಬರಬಾರದರು. ಆ ಬಡ ಮಹಿಳೆಯ ಕಷ್ಟ ನೋಡಿ, ನನ್ನ ಕೈಲಾದ ಮಟ್ಟಿಗೆ ಅವಳಿಗೆ ಮನೆ ನಿರ್ಮಿಸಿಕೊಟ್ಟಿದ್ದೇನೆ. ಇಂಥ ಬಡ ಕುಟುಂಬಗಳಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ನೆರವು ನೀಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಹಿರೇಗುತ್ತಿ ವಿಎಸ್‌ಎಸ್ ಉಪಾಧ್ಯಕ್ಷ ಹರೀಶ ನಾಯಕ, ಸಾಮಾಜಿಕ ಕಾರ್ಯಕರ್ತ ನಾರಾಯಣ ನಾಯಕ ಬರ್ಗಿ, ಪ್ರಮುಖರಾದ ತುಕಾರಾಮನಾಯಕ, ಹಿರೇಗುತ್ತಿ ಗ್ರಾಪಂ ಸದಸ್ಯ ರಮಾಕಾಂತ ಹರಿಕಂತ್ರ, ಆಶಾ ಕಾರ್ಯಕರ್ತೆ ನಾಗರತ್ನ ಹರಿಕಂತ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಾವಿತ್ರಿ ಸೂರ್ಯಕಾಂತ, ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top