ಕುಮಟ: ಬಾಡದ ಅಧಿದೇವತೆ ಶ್ರೀಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗುಡೇ ಅಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ಹಾಡುಗಳನ್ನು ಹಾಡುವ ಮೂಲಕ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಬಾಬು ನಾಯ್ಕ ಮಾತನಾಡಿ, ನಾಡು, ನುಡಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು. ದೈಹಿಕ ಶಿಕ್ಷಣ ಶಿಕ್ಷಕ ವಸಂತ ಶಾನಭಾಗ ಕಾರ್ಯಕ್ರವನ್ನು ಸಂಯೋಜಿಸಿದ್ದರು. ಶಿಕ್ಷಕರಾದ ಗೋಪಾಲ ಪಟಗಾರ, ಪುರುಷೋತ್ತಮ್ ನಾಯ್ಕ ಸಹಕರಿಸಿದ್ದರು. ಮುಖ್ಯಾಧ್ಯಾಪಕ ಎಂ.ವಿ.ವಾರೇಕರ್ ಸ್ವಾಗತಿಸಿ, ವಂದಿಸಿದರು.