ಸಿದ್ದಾಪುರ: ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.2ರಿಂದ ಕರೆ ನೀಡಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ತಾಲ್ಲೂಕು ಘಟಕದ ವತಿಯಿಂದ ಸಾಮೂಹಿಕ ರಜೆ ಕೋರಿ ಮನವಿ ಸಲ್ಲಿಸಲಾಯಿತು. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ ವಿ.ರಾವ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ತಾಲ್ಲೂಕಾ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಖಜಾಂಜಿಯಾದ ಈರಣ್ಣ ಇಲಾಳ, ಜಿಲ್ಲಾ ಸಂಘದ ರಿಯಾಜ್ ಅಹ್ಮದ್, ಪ್ರೀತಿ ಶೆಟ್ಟಿ, ಹಾಗೂ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಮೂಹಿಕ ರಜೆ ಕೋರಿ ಪಿಡಿಒಗಳ ಮನವಿ
