Slide
Slide
Slide
previous arrow
next arrow

ಭಾರತ-ಯುಕೆ ಪಾಲುದಾರಿಕೆ ಬಗ್ಗೆ ಉತ್ಸುಕನಾಗಿದ್ದೇನೆ: ಮೋದಿಗೆ ರಿಷಿ ಸುನಕ್

300x250 AD

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯುಕೆ ನೂತನ ಪ್ರಧಾನು ರಿಷಿ ಸುನಕ್ ಅವರೊಂದಿಗೆ ನಿನ್ನೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಮಾತನಾಡಿದರು. ಈ ವೇಳೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಸುನಕ್ ಅವರನ್ನು ಅಭಿನಂದಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು  ಮೋದಿ ಹೇಳಿದ್ದಾರೆ. ಇಬ್ಬರೂ ನಾಯಕರು ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ತೀರ್ಮಾನದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದ್ದಾರೆ.ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಮಾತುಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.

300x250 AD

ಟ್ವೀಟ್‌ ಮಾಡಿರುವ ಅವರು, ಯುನೈಟೆಡ್ ಕಿಂಗ್‌ಡಮ್ ಮತ್ತು ಭಾರತವು ಹೆಚ್ಚಿನದನ್ನು ಹಂಚಿಕೊಳ್ಳುತ್ತವೆ. ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಎರಡೂ ರಾಷ್ಟ್ರಗಳು ತಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಸಹಭಾಗಿತ್ವವನ್ನು ಗಾಢವಾಗಿಸಿಕೊಳ್ಳಲಿದ್ದು, ಎರಡು ಮಹಾನ್ ಪ್ರಜಾಪ್ರಭುತ್ವಗಳು ಮಹತ್ವವಾದುದನ್ನು ಸಾಧಿಸಬಹುದು ಎಂಬುದರ ಬಗ್ಗೆ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top