ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸಂಗೀತ ವಿಭಾಗ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಂತೆಯೇ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಜೊತೆಗೂಡಿ ಕನ್ನಡ ಹಾಡುಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಟಿಎಸ್ ಹಳೆಮನೆ ಕನ್ನಡ ರಾಜ್ಯೋತ್ಸವದ ಸನಿಹದಲ್ಲಿ ನಾವಿದ್ದೇವೆ. ಕನ್ನಡ ನಾಡು ನುಡಿ ತೆರನಾಗಿ ಎಲ್ಲರೂ ಪ್ರೀತಿಯನ್ನು ಹೊಂದುವ ಸಂದರ್ಭ ಇದಾಗಿದೆ. ಅನೇಕ ಶತಮಾನಗಳ ಸುದೀರ್ಘ ಇತಿಹಾಸವನ್ನು ಹೊಂದಿ ಭಾಷಾ ಸಮೃದ್ಧಿಯ ಸೌಂದರ್ಯ ಭರಿತವಾದಂತ ಭಾಷೆ ಕನ್ನಡ. ಆ ಭಾಷೆಯನ್ನು ಮಾತನಾಡುವ ನಾವು ಕನ್ನಡಿಗರೇ ಧನ್ಯರು. ಇದರ ಉಳಿವು ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಶ್ರಮಿಸೋಣ. ಕನ್ನಡವನ್ನೇ ಮಾತನಾಡೋಣ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ವಿಭಾಗ ಮುಖ್ಯಸ್ಥ ಡಾ. ಕೆ.ಜಿ. ಭಟ್ ನೇತೃತ್ವದಲ್ಲಿ ಕನ್ನಡ ಹಾಡುಗಳನ್ನು ಹಾಡಲಾಯಿತು.