ಕುಮಟಾ: ದೀಪಾವಳಿಯ ಬಲಿಪಾಡ್ಯದಂದು ಕೋಮಾರಪಂಥ ಸಮಾಜದಿಂದ ಪಟ್ಟಣದಾದ್ಯಂತ ಸಂಚರಿಸಿದ ಅಂಬಾರಿ ಮತ್ತು ಸ್ತಬ್ದ ಚಿತ್ರಗಳ ಅದ್ಧೂರಿ ಮೆರವಣಿಗೆ ಗಮನ ಸೆಳೆಯಿತು.
ದೀಪಾವಳಿ ಹಬ್ಬದ ಕೊನೆಯ ದಿನವಾದ ಬಲಿಪಾಡ್ಯದಂದು ಕೋಮಾರಮಂಥ ಸಮಾಜದಿಂದ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಅಂಬಾರಿ ಮೇಲೆ ಕನ್ನಡಾಂಬೆಯನ್ನು ಕೂರಿಸಲಾಗಿತ್ತು. ಶಿವ ಸೇರಿದಂತೆ ಇನ್ನಿತರೆ ದೇವರ ಸ್ತಬ್ದ ಚಿತ್ರಗಳ ಅದ್ಧೂರಿ ಮೆರವಣಿ ಎಲ್ಲರ ಗಮನ ಸೆಳೆಯಿತು. ಪಟ್ಟಣದ ಕುಡ್ತಗಿಬೈಲ್‌ನಿಂದ ಆರಂಭವಾದ ಅದ್ಧೂರಿ ಮೆರವಣಿಗೆ ರಥಬೀದಿ, ಮೂರುಕಟ್ಟೆ, ಬಸ್ತಿಪೇಟೆ, ಕೋಟ್ ರೋಡ್ ಮೂಲಕ ಗಿಬ್ ಸರ್ಕಲ್‌ಗೆ ತೆರಳಿತು.
ಅಲ್ಲಿಂದ ನೇರವಾಗಿ ಸುಭಾಸ್ ರಸ್ತೆ ಮೂಲಕ ಕುಡ್ತಗಿಬೈಲ್‌ಗೆ ತೆರಳಿದ ಮೆರವಣಿಗೆ ಸಮಾವೇಶಗೊಂಡಿತು. ಡೊಲ್ಲು ಕುಣಿತ ಮೆರವಣಿಗೆಗೆ ಮೆರಗು ನೀಡಿತು. ಕೋಮಾರಪಂಥ ಸಮಾಜದ ನೂರಾರು ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಅದ್ಧೂರಿ ಮೆರವಣಿಗೆಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಜನಸಂದಣಿ ನೆರೆದಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ, ಅದ್ಧೂರಿ ಮೆರವಣಿಗೆಯನ್ನು ವೀಕ್ಷಿಸಿ, ಖುಷಿಪಟ್ಟರು.