ಅಂಕೋಲಾ: ಪಟ್ಟಣದ ಕಾಕರಮಠದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ದಹಿಂಕಾಲ ಉತ್ಸವದ ಸಭೆ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ನಾಮಧಾರಿ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷ ಜಟ್ಟಿ ಬೀರಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಂಜುನಾಥ ವಿ.ನಾಯ್ಕ ಕಳೆದ ವರ್ಷದ ಖರ್ಚು ವೆಚ್ಚಗಳ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ದಹಿಂಕಾಲ ಉತ್ಸವ ಅಚರಣೆಯ ಕುರಿತು ಮಾತನಾಡಿದರು.
ಸಭೆಯಲ್ಲಿ ಪ್ರಮುಖರಾದ ಮಂಜುನಾಥ ಎಲ್.ನಾಯ್ಕ, ಎಂ.ಪಿ.ನಾಯ್ಕ, ಬಾಲಕೃಷ್ಣ ನಾಯ್ಕ, ಹೊನ್ನಪ್ಪ ನಾಯ್ಕ, ಉಪೇಂದ್ರ ನಾಯ್ಕ, ನಾಗೇಶ ನಾಯ್ಕ, ರಾಜೇಶ ಮಿತ್ರಾ ನಾಯ್ಕ, ನಾಗರಾಜ ಎಸ್. ನಾಯ್ಕ, ಕೈಗಾ ರಾಜು, ನಾಗೇಂದ್ರ ನಾಯ್ಕ, ಪ್ರಕಾಶ ನಾಯ್ಕ, ರವಿ ನಾಯ್ಕ, ಗೋವಿಂದ್ರಾಯ ನಾಯ್ಕ, ಪಾಂಡು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ: ಈ ವರ್ಷದ ದಹಿಂಕಾಲ ಉತ್ಸವದ ನೂತನವಾಗಿ ಅಧ್ಯಕ್ಷರಾಗಿ ನಾಗೇಂದ್ರ ಡಿ.ನಾಯ್ಕ ಬೇಳಾಬಂದರ, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಪರಮೇಶ್ವರ ನಾಯ್ಕ ಬೊಬ್ರುವಾಡ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಟ್ಟಿ ಬಿ.ನಾಯ್ಕ, ಉಪಾಧ್ಯಕ್ಷರಾಗಿ ಮಂಜುನಾಥ ವಿ.ನಾಯ್ಕ, ವಿನಾಯಕ ಎಸ್. ನಾಯ್ಕ, ಪ್ರಕಾಶ ಜಿ. ನಾಯ್ಕ, ಸಹಕಾರ್ಯದರ್ಶಿಯಾಗಿ ವಿನಾಯಕ ಆರ್. ನಾಯ್ಕ, ರಾಘವೇಂದ್ರ ಆರ್. ನಾಯ್ಕ, ಸಂಜೀವ ಜಿ. ನಾಯ್ಕ, ಸಂಘಟನಾ ಕಾರ್ಯದರ್ಶಿಗಳಾದ ನಾಗರಾಜ ಎಚ್.ನಾಯ್ಕ ಬೊಬ್ರುವಾಡ, ಅನೀಲ ಎಂ. ನಾಯ್ಕ, ನಾಗರಾಜ ನಾಯ್ಕ ಶಿರಕುಳಿ, ಗೌರೀಶ ಜಿ.ನಾಯ್ಕ, ಖಜಾಂಚಿಯಾಗಿ ಶ್ರೀನಿವಾಸ ವಿ.ನಾಯ್ಕ ಆಯ್ಕೆಯಾದರು.
ಸದಸ್ಯರಾಗಿ ರವಿ ಕೆ.ನಾಯ್ಕ, ಉದಯ ಎಂ.ನಾಯ್ಕ, ಅಕ್ಷಯ ಎಸ್.ನಾಯ್ಕ, ಆದೀಶ ಎಸ್.ನಾಯ್ಕ, ಅನೀಲ ಆರ್.ನಾಯ್ಕ, ಶ್ರವಣಕುಮಾರ ಎಂ. ನಾಯ್ಕ, ನಾಗೇಂದ್ರ ಎಸ್.ನಾಯ್ಕ, ರಘುರಾಜ ಜಿ.ನಾಯ್ಕ, ವಿನಾಯಕ ಆರ್.ನಾಯ್ಕ ಆಯ್ಕೆಯಾದರು.