ಕುಮಟಾ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ದಿನಕರ ಶೆಟ್ಟಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕಾಲೇಜ್‌ಗೆ ಹೆಚ್ಚುವರಿ ಕೊಠಿಡಿಗಳ ಅಗತ್ಯವಿರುವ ಬಗ್ಗೆ ಪ್ರಾಂಶುಪಾಲರು ನನ್ನ ಗಮನಕ್ಕೆ ತಂದಿದ್ದರು. ಹಾಗಾಗಿ ಸರ್ಕಾರದಿಂದ 1 ಕೋಟಿ ರೂ. ಅನುದಾನ ಒದಗಿಸಿದ್ದೇನೆ. ಇನ್ನು ನಾಲ್ಕೈದು ಕೊಠಡಿಗಳು ಬೇಕೆಂಬ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಸಿಎಂ ಜೊತೆಗೆ ಮಾತನಾಡಿ, ಹೆಚ್ಚಿನ ಅನುದಾನ ಒದಗಿಸಿಕೊಡುತ್ತೇನೆ. ಇನ್ನು ಕಾಲೇಜ್‌ಗೆ ಅಗತ್ಯವಾದ ಸಣ್ಣಪುಟ್ಟ ಅಗತ್ಯತೆಯನ್ನು ಸಿಡಿಸಿ ಕಮೀಟಿ ಮತ್ತು ಕುಮಟಾ ಪುರಸಭೆ ಪೂರೈಸುವ ಕಾರ್ಯ ಮಾಡುತ್ತದೆ. ಅಲ್ಲದೇ ನಮ್ಮ ಕಾಲೇಜ್‌ನಲ್ಲಿ ಈ ವರ್ಷ ದಾಖಲೆಯ ಎಡ್ಮಿಷನ್ ಆಗಿರುವುದು ಖುಷಿಯ ಸಂಗತಿ. ಇದಕ್ಕೆ ನಮ್ಮ ಕಾಲೇಜಿನಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣವೇ ಕಾರಣ. ಉತ್ತಮ ಟೀಚಿಂಗ್ ಸ್ಟಾಫ್ ಇದೆ. ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡಬೇಕೆಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲೆ ವಿಜಯಾ ನಾಯ್ಕ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ ಐ ಹೆಗಡೆ, ಯೋಗೇಶ ಪಟಗಾರ, ಗೋಪಾಲಕೃಷ್ಣ ಉಗ್ರು, ಅರುಣ ಮಣಕೀಕರ್, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಸದಸ್ಯ ಸಂತೋಷ ನಾಯ್ಕ, ಮುಖ್ಯಾಧಿಕಾರಿ ಅಜಯ ಭಂಡರ‍್ಕರ್, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಬಿಜೆಪಿ ಮುಖಂಡರಾದ ವಿನೋದ ಪ್ರಭು, ಗುತ್ತಿಗೆದಾರ ಸಂತೋಷ ನಾಯ್ಕ, ಉದಯ ನಾಯ್ಕ, ಉಪನ್ಯಾಸಕರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.