ಶಿರಸಿ: ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು.
ಭಾರತದ ಐಕ್ಯತೆ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 3570 ಕಿಲೋ ಮೀಟರ್ ಉದ್ದ ಪಾದಯಾತ್ರೆಯನ್ನ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದು ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಬಂದಾಗ ರಾಹುಲ್ ಗಾಂಧಿ ಜೊತೆ ಸಂತೋಷ್ ಶೆಟ್ಟಿ ಹೆಜ್ಜೆ ಹಾಕಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಪ್ತರಾಗಿರುವ ಸಂತೋಷ್ ಶೆಟ್ಟಿ ಅವರನ್ನ ಡಿ.ಕೆ ಶಿವಕುಮಾರ್ ಅವರೇ ರಾಹುಲ್ ಗಾಂಧಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಟ್ಟಿದ್ದು ಸಂತೋಷ್ ಶೆಟ್ಟಿ ಕೈ ಹಿಡಿದು ಕೆಲ ಕಾಲ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಜಿಲ್ಲಾ ಯುವ ಕಾಂಗ್ರೆಸ್ ನಿಂದ ಹಲವಾರು ಕಾರ್ಯಕರ್ತರು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಭಾರತದ ಇತಿಹಾಸದಲ್ಲಿಯೇ ದೇಶದ ಏಕತೆ ಸಲುವಾಗಿ ಇಷ್ಟೊಂದು ದೊಡ್ಡ ಪಾದಯಾತ್ರೆಯನ್ನ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಹಮ್ಮಿಕೊಂಡಿದ್ದಾರೆ. ನಾನು ಬಾಲ್ಯದಿಂದಲೇ ಗಾಂಧಿ ಕುಟುಂಬದ ಅಭಿಮಾನಿ. ನನ್ನ ನೆಚ್ಚಿನ ನಾಯಕರಾಗಿದ್ದ ರಾಜೀವ್ ಗಾಂಧಿ ಪುತ್ರರಾದ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ನೀಡಿದೆ.
• ಸಂತೋಷ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ