• Slide
    Slide
    Slide
    previous arrow
    next arrow
  • ಕ್ರೈಸ್ತ ಮತದಿಂದ ಪುನಃ ಹಿಂದೂ ಧರ್ಮಕ್ಕೆ ಮರಳಿದ 15 ಮಂದಿ

    300x250 AD

    ಬೆಂಗಳೂರು: ಕೆಲ ವರ್ಷಗಳ ಹಿಂದೆ ಕ್ರೈಸ್ಥ ಮತಕ್ಕೆ ಮತಾಂತರಗೊಂಡಿದ್ದ 15 ಜನರು ಮರಳಿ ಹಿಂದೂ ಧರ್ಮಕ್ಕೆ ಬಂದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿ ನೆಲಗುಂದನಹಟ್ಟಿ ಗ್ರಾಮದಲ್ಲಿ ನಡೆದಿದೆ.

    ನೆಲಗುಂದನಹಟ್ಟಿ ಗ್ರಾಮದಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ 15 ಜನರು ಹಿಂದೂ ಧರ್ಮಕ್ಕೆ ಘರ್ ವಾಪಸಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ನವಭಾರತ ಹಿಂದೂ ದಲಿತ ಸಂಘ ಇವರನ್ನು ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಮಾಡಿದೆ.

    ಕೆಲವು ವರ್ಷಗಳ ಹಿಂದೆ ಕೂಲಿ ಕೆಲಸ ಮಾಡಿಕೊಂಡಿದ್ದ ಸುಮಾರು 35 ಕುಟುಂಬದ 68 ಜನರು ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದರು. ಮತಾಂತರಗೊಂಡ 68 ಜನರು ಎಸ್​ಸಿ ಪ್ರಮಾಣ ಪತ್ರವನ್ನು ಹೊಂದಿದ್ದಾರೆ. ಇವರುಗಳನ್ನು ವಿವಿಧ ರೀತಿಯ ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡಲಾಗಿದೆ ಎಂಬ ಆರೋಪ ಇದೆ.

    300x250 AD

    68 ಜನರ ಪೈಕಿ 15 ಜನರನ್ನು ಇಂದು ನವಭಾರತ ಹಿಂದೂ ದಲಿತ ಸಂಘ ಪ್ರತಿಜ್ಞೆ ಬೋಧಿಸುವ ಮೂಲಕ ಮರಳಿ ಹಿಂದೂ ಧರ್ಮಕ್ಕೆ ಕರೆತಂದಿದೆ.

    ಕೃಪೆ: http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top