Slide
Slide
Slide
previous arrow
next arrow

ವ್ಯಕ್ತಿಯ ಮೇಲೆ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

300x250 AD

ಜೊಯಿಡಾ:  ಮನೆಯ ಸಮೀಪದಲ್ಲಿ ಮೇಯಲು ಹೋಗಿದ್ದ ದನಕರುಗಳನ್ನು ತರುತ್ತಿರುವ ವೇಳೆ ವ್ಯಕ್ತಿಯೊಬ್ಬನನ್ನು  ಕರಡಿ ಗಾಯಗೊಳಿಸಿದ ಘಟನೆ ನಡೆದಿದೆ. ಬಾಪೇಲಿ ಗ್ರಾಮದ  ಕಾಳು ಭಾಬು ಪಾಟೀಲ 51 ವರ್ಷದ ವ್ಯಕ್ತಿಯನ್ನು ಎರಡು ಮರಿಗಳು ಇದ್ದ ಕರಡಿ ಗಾಯಗೊಳಿಸಿದೆ.,

ಕರಡಿ ದಾಳಿ ಮಾಡಿದಾಗ ವ್ಯಕ್ತಿ ಕಿರುಚಿಕೊಂಡಿದ್ದು, ಆಗ ಕರಡಿ ಇವನನ್ನು ಬಿಟ್ಟು ಕಾಡಿಗೆ ತನ್ನ ಮರಿಗಳೊಂದಿಗೆ ಓಡಿಹೊಗಿದೆ ಎಂದು ತಿಳಿದು ಬಂದಿದೆ. ನಂತರ ಅರಣ್ಯ ಇಲಾಖೆಯ ಡಿ ಆರ್ ಎಪ್ ಓ ವಿಠ್ಠಲ ಗುಬಚೆ ಮತ್ತು ಗಾರ್ಡ  ಪ್ರಶಾಂತ ಬಾಗಿ ಇವರು ಜೊಯಿಡಾ ತಾಲೂಕಾ ಆಸ್ಪತ್ರೆಗೆ ಗಾಯಗೊಂಡ ವ್ಯಕ್ತಿಯನ್ನು ತಂದು ಚಿಕಿತ್ಸೆ ಕೊಡಿಸಿದ್ದಾರೆ..

300x250 AD
Share This
300x250 AD
300x250 AD
300x250 AD
Back to top