• Slide
    Slide
    Slide
    previous arrow
    next arrow
  • ಹಸಿ ಅಡಿಕೆ ಆಮದಿಗೆ ಕಡಿವಾಣ ಹಾಕಿ,ದೇಸಿ ಅಡಿಕೆಗೆ ಪ್ರೋತ್ಸಾಹ ನೀಡಿ:ಕೇಂದ್ರಕ್ಕೆ R.M.ಹೆಗಡೆ ಬಾಳೇಸರ ಆಗ್ರಹ

    300x250 AD

    ಸಿದ್ದಾಪುರ: ಭೂತಾನ್‌’ನಿಂದ ಆಮದು ಮಾಡಿಕೊಳ್ಳುತ್ತಿರುವ ಹಸಿ ಅಡಿಕೆಯ ಮೇಲೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವವರಿಗೆ ತೊಂದರೆ ಆಗುತ್ತದೆ. ಕುರಿತು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.

    ಪಟ್ಟಣದ ಟಿಎಂಎಸ್‌ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ಬೆಳೆ ಹೆಚ್ಚಳದ ನಡುವೆಯ 17000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಬುಧವಾರ ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್ ಟಿ) ಅನುಮತಿ ನೀಡಿದೆ.
    ಇದೀಗ ಭೂತಾನ್‌ನಿಂದ ಕನಿಷ್ಠ ಆಮದು ಬೆಲೆಯ ಷರತ್ತು ಸಹ ಇಲ್ಲದೆಯೇ 2022-23ನೇ, ಸಾಲಿನಲ್ಲಿ 8500 ಟನ್ ಹಸಿರು ಅಡಕೆ ಆಮದು ಮಾಡಿಕೊಂಡಿದ್ದು, 2023-24ರಿಂದ ಪ್ರತಿ ವರ್ಷ 17000 ಟನ್ ಆಗುವ ಸಾಧ್ಯತೆಯಿದೆ.

    17000 ಟನ್ ಹಸಿ ಅಡಿಕೆಯಲ್ಲಿ ಸರಿಸುಮಾರು 2500 ಟನ್ ಒಣ ಅಡಕೆ ಆಗುತ್ತದೆ. ಇದರ ಸಾಗಾಣಿಕೆ ವೆಚ್ಚ ಮತ್ತು ಸಂಸ್ಕರಣಿಯ ಅವಧಿ ಹಾಗೂ ಶುಲ್ಕವು ಹೆಚ್ಚಿನದಾಗುತ್ತದೆ. ಭೂತಾನ್ ನ ಅಡಕೆಯನ್ನು ಪಶ್ಚಿಮ ಬಂಗಾಳದ ಜಯಗಾಂವ್ ಬಂದರಿನ ಮೂಲಕ ಆಮದು ಮಾಡಿಕೊಂಡಾಗ ಮಾತ್ರ ಎಂಐಪಿ ವಿನಾಯಿತಿ ದೊರೆಯುತ್ತದೆ. ಭಾರತದಲ್ಲಿ ಒಟ್ಟು ಸೇವಿಸುವ ಮತ್ತು ಉಪಯೋಗಿಸುವ ಅಡಿಕೆ ಪ್ರಮಾಣ 8 ಲಕ್ಷ ಟನ್‌ಗೂ ಅಧಿಕವಿರುವುದರಿಂದ ಆಮದು ಹೆಚ್ಚಿನ ಪ್ರಭಾವ ಬೀರದಿದ್ದರೂ ಅಕ್ರಮ ನುಸುಳುವಿಕೆಯ ಸಾಧ್ಯತೆ ಇದ್ದು, ಅದನ್ನು ನಿರ್ಬಂಧಿಸುವ ಕಾರ್ಯ ಆಗಬೇಕು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು 15 ಲಕ್ಷ ಟನ್‌ಗೂ ಹೆಚ್ಚಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಹೆಚ್ಚಿನ ಆಮದಿಗೆ ಕಡಿವಾಣ ಹಾಕಬೇಕು. ಆಮದಿನ ಎಂಐಪಿಯನ್ನು ಪ್ರತಿ ಕೆಜಿಗೆ 360 ರೂಪಾಯಿಗೆ ಹೆಚ್ಚಿಸುವ ಮೂಲಕ ದೇಸಿ ಅಡಕೆ ಮಾರುಕಟ್ಟೆಯು ಸ್ಥಿರತೆ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು, ಈ ವರ್ಷ ವಿಪರೀತ ಮಳೆಯಿಂದಾಗಿ ಶೇ. 25 ಅಡಕೆ ಬೆಳೆ ಹಾನಿ, ಆಗಿದೆ, ಆದ್ದರಿಂದ ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು. ಅಡಕೆ ಬೆಳೆ ಹಾನಿಗೆ ಎಕರೆವಾರು ಪರಿಹಾರ ನೀಡಿ ರೈತರನ್ನು ಕಾಪಾಡಬೇಕು ಎಂದು ಆರ್. ಎಂ. ಹೆಗಡೆ ಬಾಳೇಸರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

    300x250 AD

    ಅಡಕೆ ಬೆಳೆಗಾರರ ಸಮಸ್ಯೆಗಳನ್ನು ನೀಗುವಲ್ಲಿ ಕೆಆ‌ರ್ ಎಂ. ಅಡಕೆ ಮಹಾಮಂಡಲ, ಟಿಎಸ್‌ಎಸ್‌, ಟಿಎಂಎಸ್ ಸೇರಿ ಅಡಕೆ ಬೆಳೆಗಾರರಿಗೆ ಸಂಬಂಧಿಸಿದ ಎಲ್ಲ ಸಂಘ-ಸಂಸ್ಥೆಗಳೂ ಪ್ರಯತ್ನಶೀಲವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಅಡ ಬೆಳೆಗಾರರ ಹಿತ ಕಾಪಾಡಲು ಮುಂದಾಗಬೇಕು ಎಂದರು. ಕೆಆ‌ರ್ ಎಂನ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಟಿಎಂಎಸ್‌ ನಿರ್ದೇಶಕರಾಗಿ ಜಿ.ಆರ್. ಹೆಗಡೆ, ಸಿ.ಎನ್.ಹೆಗಡೆ, ಸುಬ್ರಹ್ಮಣ ಭಟ್ಟ, ವ್ಯವಸ್ಥಾಪಕ ಸತೀಶ ಹೆಗಡೆ, ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಇತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top