ಯಲ್ಲಾಪುರ: ಯಲ್ಲಾಪುರ- ಅಂಕೋಲಾವರೆಗೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹಲವಾರು ಬೃಹತ್ತಾದ ಗುಂಡಿಗಳು ಬಿದ್ದು ರಸ್ತೆ ಧೂಳುಮಯವಾಗಿದ್ದು, ಹೊಂಡ ತಪ್ಪಿಸಲು ಹೋಗಿ ಹಾಗೂ ಧೂಳಿನ ಕಾರಣಕ್ಕಾಗಿಯೇ ಪ್ರತಿನಿತ್ಯ ಹಲವಾರು ಅಪಘಾತಗಳಾಗುತ್ತಿದೆ.
ಈ ರಸ್ತೆಯ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯ ಡಾಂಬರ್ ಕಿತ್ತು ಹೋದ ಪರಿಣಾಮ ವಾಹನ ಚಲಿಸಿದ ಮೇಲೆ ರಸ್ತೆಯ ಸುತ್ತ ಧೂಳು ಆವರಿಸುತ್ತದೆ. ಲಘು ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರಿಗೆ ಬಹಳಷ್ಟು ಗೊಂದಲವಾಗಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ರಸ್ತೆ ಸರಿಯಾಗಿರುವ ಕಾಲದಲ್ಲಿ ಯಲ್ಲಾಪುರದಿಂದ ಅಂಕೋಲಾ ಬಾಳೆಗುಳಿಗೆ 1 ಗಂಟೆ ಕಾಲ ವಾಹನ ಚಲಿಸುವ ಸಮಯವನ್ನು ಇದೀಗ 2 ಗಂಟೆ ಚಲಿಸುವ ಸ್ಥಿತಿ ನಿರ್ಮಾಣಗೊಂಡಿದೆ.
ಪ್ರತಿನಿತ್ಯ ಸುಮಾರು 10ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದು, ಯಲ್ಲಾಪುರ ತಾಲೂಕಿನ ಇಡಗುಂದಿಯಿAದ ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್ ನ ವರೆಗಿನ ಸುಮಾರು 57 ಕಿಲೋಮೀಟರ್ ರಸ್ತೆ ಬಹುತೇಕ ಹೊಂಡ, ಧೂಳುಮಯವಾಗಿದೆ. ಇದರಿಂದ ವಾಯುಮಾಲಿನ್ಯ ಅತಿಯಾಗುತ್ತಿದೆ. ಈ ಕುರಿತು ಸ್ಥಳಿಯ ಶಾಸಕರು, ಸಚಿವರು, ಸಂಸದರು ಗಮನ ಹರಿಸಿ ರಸ್ತೆಯ ದುರಸ್ಥಿಗೆ ಕ್ರಮಕೈಗೊಳ್ಳಬೇಕಾಗಿದೆ.