Slide
Slide
Slide
previous arrow
next arrow

ದೇಶದ ಜನತೆ ಎಲ್‌ಐಸಿಯ ಮೇಲೆ ವಿಶ್ವಾಸವಿಟ್ಟಿದೆ: ಗಣಪತಿ ಭಟ್

300x250 AD

ಸಿದ್ದಾಪುರ; 1956 ರಲ್ಲಿ ಕೇಂದ್ರ ಸರಕಾರವು ನೀಡಿದ ಜವಾಬ್ದಾರಿಯಂತೆ ಭಾರತೀಯ ಜೀವವಿಮಾ ನಿಗಮವು ಕೇವಲ ಲಾಭವನ್ನೊಂದೇ ನೋಡದೇ ದೇಶದುದ್ದಗಲಕ್ಕೂ ಜೀವವಿಮೆ ವ್ಯಾಪಿಸುವಂತೆ ಮಾಡಿದ್ದು ದೇಶದ ಜನತೆಯಲ್ಲಿ ಉಳಿತಾಯದ ಮನೋಭಾವ ಬೆಳೆಸಿದೆ. ಇಂದು ಪ್ರಧಾನ ಹಾಗೂ ಉಪಶಾಖೆಗಳನ್ನು ಎಲ್ಲಡೆ ತೆರೆದು ಜನತೆಗೆ ಹತ್ತಿರದಲ್ಲಿ ವಿಮಾ ಸೌಲಭ್ಯ ದೊರೆಯುವಂತೆ ಮಾಡಿದೆ ಎಂದು ನಿಗಮದ ಶಿರಸಿ ಪ್ರಧಾನ ಶಾಖೆಯ ಹಿರಿಯ ಶಾಖಾಧಿಕಾರಿ ಗಣಪತಿ ಎನ್.ಭಟ್ಟ ಹೇಳಿದ್ದಾರೆ.
ಅವರು ನಿಗಮದ ಸ್ಥಳೀಯ ಸಂಪರ್ಕ ಶಾಖೆಯ 14 ನೇ ವರ್ಷದ ಹುಟ್ಟುಹಬ್ಬವನ್ನು ಉದ್ಘಾಟಿಸಿ, ವಿಶೇಷ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಗೌರವಿಸಿ ಮಾತನಾಡುತ್ತಿದ್ದರು. ಇಂದು ದೇಶದ ವಿಮಾ ಕ್ಷೇತ್ರದಲ್ಲಿ ಸಾಕಷ್ಟು ಕಂಪನಿಗಳಿದ್ದರೂ 70 ಶೇಕಡಾದಷ್ಟು ಪಾಲಿಸಿ ಹಾಗೂ ಪ್ರೀಮಿಯಂ ಆದಾಯವನ್ನು ಎಲ್‌ಐಸಿ ಪಡೆಯುತ್ತಿದ್ದು ಜನತೆ ಅದರ ಮೇಲಿಟ್ಟಿರುವ ವಿಶ್ವಾಸ ಹಾಗೂ ಅದರ ತ್ವರಿತಗತಿಯ ಉತ್ತಮ ಸೇವೆಗೆ ಸಾಕ್ಷಿಯಾಗಿದೆ ಎಂದರು. ಸಿದ್ದಾಪುರ ಸಂಪರ್ಕ ಶಾಖೆಯು ನಿಗದಿತ ಗುರಿಯನ್ನು ತಲುಪುವಲ್ಲಿ ದಾಪುಗಾಲು ಹಾಕುತ್ತಿದ್ದು ಪ್ರೀಮಿಯಂ ಆದಾಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ದೀಪಕ ಹೆಗಡೆ, ಅಮಿತ ನಾಯ್ಕ ಹಾಗೂ ಸಿದ್ಧಾರ್ಥ ಬರ‍್ಕರ್ ಅವರುಗಳನ್ನು ಹಾಗೂ ವಿಶೇಷ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ನಿಗಮದ ಹಿರಿಯ ಅಧಿಕಾರಿಗಳಾದ ಮಂಜುನಾಥ ಬೆಣಗಿ, ಎಸ್.ಪಿ.ಹೆಗಡೆ, ಆಡಳಿತ ವಿಭಾಗದ ಪ್ರವೀಣ ಹೆಗಡೆ, ಆರ್.ಡಿ.ಮಾಪಾರಿ ಇತರರು ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಸಂಪರ್ಕ ಶಾಖೆಯ ಶಾಖಾಧಿಕಾರಿ ಮಲ್ಲಿಕಾರ್ಜುನ ನೀಲಗುಂದ ಅವರು ಎಲ್‌ಐಸಿ ಪ್ರಾರಂಭವಾದಾಗಿನಿಂದ ಉತ್ತಮ ವ್ಯವಹಾರವನ್ನು ನಡೆಸುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಸರಾಸರಿ 20 ರಿಂದ 25 ಶೇಕಡಾದಷ್ಟು ಬೆಳವಣಿಗೆಯನ್ನು ದಾಖಲಿಸುತ್ತಿದೆ. ನಿಗಮವು ಈವರೆಗೂ ಎಲ್ಲಿಯೂ ತನ್ನ ಶಾಖೆಯನ್ನು ಮುಚ್ಚಿಲ್ಲ. ಎಲ್ಲಿಂದಲೂ ನಯಾಪೈಸೆ ಸಾಲವನ್ನೂ ಪಡೆದಿಲ್ಲ. ಬದಲಿಗೆ ದೇಶದ ಅಭಿವೃದ್ಧಿಗೆ ಕೈಜೋಡಿಸುವ ಜೊತೆಯಲ್ಲಿ ವಿವಿಧ ಅಗತ್ಯಗಳಿಗೆ ಸಾಕಷ್ಟು ಸಾಲವನ್ನು ನೀಡಿ ಸುಭದ್ರವಾಗಿ ನಿಂತಿದೆ ಎಂದರು.
ಆರ್ಥಿಕ ವ್ಯವಹಾರದಲ್ಲಿ ಸಿದ್ದಾಪುರ ಸಂಪರ್ಕ ಶಾಖೆಯು ಮುಂಚೂಣಿಯಲ್ಲಿದ್ದು ಇದನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು ಮತ್ತಷ್ಟು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕೆಂದರು. ಯು.ಕೆ.ಸೌಹಾರ್ದ ಸೊಸೈಟಿ, ಸೆಂಟ್ ಮಿಲಾಗ್ರಿಸ್ ಶಾಖೆಗಳ ಅಧಿಕಾರಿಗಳು, ನಿಗಮದ ಹಿರಿಕಿರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top