Slide
Slide
Slide
previous arrow
next arrow

ಕಡವೆ ಕ್ರಾಸ್ ಬಳಿ ಪೋಲೀಸ್ ವಾಹನ ಪಲ್ಟಿ;ಕೆಲವರಿಗೆ ಗಾಯ

300x250 AD

ಶಿರಸಿ: ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಪೊಲೀಸ್ ವಾಹನವೊಂದು ಪಲ್ಟಿಯಾದ ಘಟನೆ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯ ಕಡವೆ ಕ್ರಾಸ್ ಹತ್ತಿರ ನಡೆದಿದೆ. ಕಾರವಾರದಿಂದ ಶಿರಸಿಗೆ ವಿಶೇಷ ಕರ್ತವ್ಯಕ್ಕಾಗಿ  ಪೊಲೀಸರು ಬರುತ್ತಿದ್ದಾಗ  ಕಡವೆ ಕ್ರಾಸ್ ಹತ್ತಿರ  ಈ ಘಟನೆ ಸಂಭವಿಸಿದೆ.

ಶಿರಸಿ ಕಡೆಯಿಂದ ಅತೀವೇಗವಾಗಿ ಕಾರೊಂದು ವಿರುದ್ಧ ದಿಕ್ಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ವಾಹನದ ಚಾಲಕ ಕಾರನ್ನು ತಪ್ಪಿಸಲು ಹೋಗಿ ಪಲ್ಟಿ ಹೋಡೆದಿದೆ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ವಾಹನದಲ್ಲಿದ್ದ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top