Slide
Slide
Slide
previous arrow
next arrow

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಸೆ.29 ರಂದು ನೇತ್ರದಾನ ಶಿಬಿರ

300x250 AD

ಹೊನ್ನಾವರ: ತಾಲೂಕ ಆಸ್ಪತ್ರೆ ,ಲಾಯನ್ಸ್ ಕ್ಲಬ್ ಹೊನ್ನಾವರ ವಿಧ್ಯಾರ್ಥಿ ಒಕ್ಕೂಟ, ಎಸ್.ಡಿ.ಎಂ ಪದವಿ ಮಹಾವಿದ್ಯಾಲಯ ಹೊನ್ನಾವರ ಮತ್ತು ಪ್ರಸಾದ ನೇತ್ರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.29 ರಂದು ನೇತ್ರದಾನ ನೊಂದಣಿ ಕಾರ್ಯಗಾರ ಮತ್ತು ನೇತ್ರ ಚಿಕಿತ್ಸೆ ಶಿಬಿರ ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಬೆಳಿಗ್ಗೆ 10.30 ಘಂಟೆಗೆ ನಡೆಯಲಿದೆ.

ಇದಕ್ಕೂ ಪೂರ್ವದಲ್ಲಿ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದಿಂದ ನೇತ್ರದಾನದ ಕುರಿತು ಜಾಗೃತಿ ಜಾಥಾ ಪ್ರಾರಂಭವಾಗಲಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸಮಾಪ್ತಿಗೊಳ್ಳಲಿದೆ.ನಂತರ ಆಸ್ಪತ್ರೆಯಲ್ಲಿ ನಡೆಯುವ ನೇತ್ರಧಾನ ನೋಂದಣಿ ಕಾರ್ಯಗಾರದಲ್ಲಿ ಪ್ರಸಾದ ನೇತ್ರಾಲಯದ ನೇತ್ರ ತಜ್ಞರು ನೇತ್ರದಾನದ ಮಹತ್ವದ ಕುರಿತು ಮಾತನಾಡಲಿದ್ದಾರೆ. ಆ ದಿನದಂದು ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡವರಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರ ಜೊತೆಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸಾ ಶಿಬಿರ ಸಹ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೇತ್ರದಾನದಂತಹ ಪುಣ್ಯದ ಕಾರ್ಯದಲ್ಲಿ ಕೈ ಜೋಡಿಸುವಂತೆ ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕೀಣಿಯವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top