Slide
Slide
Slide
previous arrow
next arrow

ಕಣಗೀಲ್ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಸಭೆ

300x250 AD

ಅಂಕೋಲಾ : ತಾಲೂಕಿನ ಕಣಗೀಲ್ ಮೀನುಗಾರರ ಸಹಕಾರಿ ಸಂಘದ 2021-2022ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸಂಘದ ಆಡಳಿತ ಕಚೇರಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಜು ಹರಿಕಂತ್ರ, ಸಂಘವು ಸ್ಥಾಪನೆಯಾಗಿ ಹದಿನಾಲ್ಕು ವರ್ಷ ಪೂರೃಸಿದ್ದು ಅಂದಿನಿಂದ ಇಂದಿನವರೆಗೆ ಸಂಘದ ಸದಸ್ಯರ ಹಾಗೂ ಆಡಳಿತ ಮಂಡಳಿಯವರ ಸಹಕಾರದಿಂದಾಗಿ ಸಂಘವು ಲಾಭದಲ್ಲಿಯೇ ಮುಂದುವರಿದಿದ್ದು ಈ ವರ್ಷ ಅತಿ ಹೆಚ್ಚಿನ ಲಾಭ ಗಳಿಸಲಾಗಿದೆ ಸರಕಾರದ ವಿವಿಧ ಯೋಜನೆಗಳನ್ನು ಸದಸ್ಯರಿಗೆ ತಲುಪಿಸುವಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯದರ್ಶಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಎಸ್,ಎಸ್,ಎಲ್,ಸಿ, ಪಿ,ಯು,ಸಿ ಹಾಗೂ ಡಿಗ್ರಿ ಯಲ್ಲಿ ಶೇ 75% ಕ್ಕಿಂತ ಹೆಚ್ಚಿನ ಅಂಕಪಡೆದ 25 ಮೀನುಗಾರರ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಪಟ್ಟಿ ಪೆನ್ನುಗಳನ್ನು ನೀಡಿ ಸಹಕರಿಸಿದ ನಗರದ ಜನೌಷಧಿ ಕೆಂದ್ರದ ಮಾಲಿಕರಾದ ಮಂಜುನಾಥ ಹರಿಕಂತ್ರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿರ್ದೇಶಕರಾದ ಮಾರುತಿ ಅಂಬಿಗ ಕೊಡ್ಲಗದ್ದೆ, ಕೃಷ್ಣ ಹರಿಕಂತ್ರ, ಮಹಾಬಲೇಶ್ವರ ಹರಿಕಂತ್ರ, ಶಂಕರ ಹರಿಕಂತ್ರ ಕಣಗೀಲ, ಸಲ್ಮಾನ್ ಯೂಸೂಪ್ ಡಾಂಗಿ ಅಗ್ಗರಗೋಣ, ಗಣಪತಿ ಹರಿಕಂತ್ರ, ದೇವರಾಯ ಅಂಬಿಗ ಮೊರೊಳ್ಳಿ, ಕೀರಾ ಹರಿಕಂತ್ರ ಮಕ್ಕಿಗದ್ದೆ, ಮಹಿಳಾ ಪ್ರತಿನಿಧಿ ಲಕ್ಷ್ಮಿ ಹರಿಕಂತ್ರ, ಪ್ರತಿಭಾ ಹರಿಕಂತ್ರ, ಗಣೇಶ ಅಂಬಿಗ, ಅಶೋಕ ಅಂಬಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಾ ಹರಿಕಂತ್ರ ಸ್ವಾಗತಿಸಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top