Slide
Slide
Slide
previous arrow
next arrow

ಶಿರಸಿ ಪೋಲೀಸರಿಂದ PFI ನ 3 ಕಾರ್ಯಕರ್ತರ ಬಂಧನ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ PFI ಸಂಘಟನೆಯ ಮೂವರು ಸದಸ್ಯರನ್ನು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯಿಂದ ಮುಂಜಾಗೃತ ಕ್ರಮವಾಗಿ ಬಂಧಿಸಿದ ಘಟನೆ ನಡೆದಿದೆ.

ಸೆ.22 ರಂದು NIA ರವರು ಬಂಧಿಸಿದ್ದ ಅಬ್ದುಲ್ ಅಜೀಜ್ ಶುಕೂರ್ ಹೊನ್ನಾವರ್ ಈತನ ಸಹೋದರ ಟಿಪ್ಪು ನಗರದ ಅಬ್ದುಲ್ ರಜಾಕ್ ಅಬ್ದುಲ್ ಶುಕುರ್ ಹೊನ್ನಾವರ(28) ಬಂಧಿಸಿದ್ದು, ಈತನ ಜೊತೆ ಶಿರಸಿಯ ಕೆರೆಕೊಪ್ಪದ ನಿವಾಸಿ ವೃತ್ತಿಯಲ್ಲಿ ಮ್ಯೆಕಾನಿಕ್ ಆಗಿರುವ ಇಮಾಮ್ ತಂದೆ ಅಬ್ದುಲ್ ಸಮ್ಮದ್ ಸಾಬ್( 32),ಟಿಪ್ಪು ನಗರದ ವಾಹನ ಚಾಲಕ ಅತಾವುಲ್ಲ ತಂದೆ ಅಬ್ದುಲ್ ಗಣಿ ತಡಸ್(29 ) ನನ್ನು ಸಹ ಬಂಧಿಸಲಾಗಿದೆ.

300x250 AD

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಗುಂಪು ಸೇರಿಸಿ ಗಲಭೆ ಮಾಡುವ ಉದ್ದೇಶ ಸೇರಿದಂತೆ PAR NO: 19/22 u/s 107,151 crpc ನಡಿ ಪ್ರಕರಣ ದಾಖಲು ಮಾಡಲಾಗಿದೆ. DSP ರವಿ ಡಿ.ನಾಯ್ಕ್, CPI ರಾಮಚಂದ್ರ ನಾಯಕ್ ರವರುಗಳ ಮಾರ್ಗದರ್ಶನದಲ್ಲಿ, PSI ಪ್ರತಾಪ್, ಭಿಮಾಶಂಕರ್ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ್ದಾರೆ.

Share This
300x250 AD
300x250 AD
300x250 AD
Back to top