ಕುಮಟಾ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ತಾಲೂಕು ಮಟ್ಟದ ಕನ್ನಡ ಭಾಷಾ ಕಾರ್ಯಗಾರ ನಡೆಯಿತು.
ತಾಲೂಕು ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಕನ್ನಡ ಭಾಷಾ ಕಾರ್ಯಗಾರಕ್ಕೆ ಪ್ರೌಢ ಶಾಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಶೇಟ್ ವಾಗ್ರೇಕರ್ ಚಾಲನೆ ನೀಡಿ ಮಾತನಾಡಿದ ಅವರು, ಬದಲಾದ ವಾತಾವರಣಕ್ಕೆ ಶಿಕ್ಷಕರು ಕೂಡ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣದ ಗುಣಮಟ್ಟವನ್ನು ಈಗಿನ ಶೈಕ್ಷಣಿಕ ಪದ್ದತಿಗೆ ಸುಧಾರಿಸಿಕೊಳ್ಳಬೇಕು. ಕಲಿಕಾ ಚೇತರಿಕೆ ಮಕ್ಕಳಿಗೆ ನೀಡಿದರೆ, ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ನಮ್ಮೆಲ್ಲ ಶಿಕ್ಷಕರು ಸಿದ್ಧರಾಗಬೇಕು. ಈ ಕಾರ್ಯಗಾರದ ಪ್ರಯೋಜನ ಪಡೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರೇಖಾ ನಾಯ್ಕ, ಬಿಆರ್ಪಿ ವಿನೋದ ನಾಯ್ಕ ಪಾಲ್ಗೊಂಡಿದ್ದರು. ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ವಿನಾಯಕ ನಾಯ್ಕ ಅವರು ಕಲಿಕಾ ಚೇತರಿಕೆ ಕುರಿತು ಉಪನ್ಯಾಸ ನೀಡಿದರು. ಗೀತಾ ಪಟಗಾರ ಕಲಿಕಾ ಚಟುವಟಿಕೆಗಳ ಕುರಿತು ಪಾಠ ಮಾಡಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಜಿ.ಭಟ್ ವಹಿಸಿದ್ದರು. ಅಲ್ಲದೇ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆಗಳ ಬಗ್ಗೆ ಚರ್ಚಿಸಿ ಸಿದ್ಧಪಡಿಸಿದರು. ಕಾರ್ಯಗಾರದಲ್ಲಿ ಮಂಜುಳಾ ಕುಮಟಾಕರ್ ಸ್ವಾಗತಿಸಿದರು. ನವ್ಯ ಹೆಬ್ಬಾರ ನಿರ್ವಹಿಸಿದರು. ನಯನಾ ನಾಯಕ ವಂದಿಸಿದರು.