• Slide
    Slide
    Slide
    previous arrow
    next arrow
  • ಲಯನ್ಸ್ ಕ್ಲಬ್‌ನಿಂದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

    300x250 AD

    ಅಂಕೋಲಾ: ಇಲ್ಲಿನ ಸಿಟಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕೇರಿಯಲ್ಲಿ ಶಾಲೆಯ ಮಕ್ಕಳಿಗಾಗಿ ವಿವಿಧ ಮನರಂಜನಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
    ಈ ಕಾರ್ಯಕ್ರಮದ ಉದ್ಘಾಟಕರಾಗಿ ಲಯನ್ಸ್ 317ಬಿ ಯ ನಿಕಟಪೂರ್ವ ರಿಜನಲ್ ಚೇರಪರ್ಸನ್ ಎಂ.ಜೆ.ಎಫ್. ರಾಜೇಶ ಸಾಲಿಹಿತ್ತಲ ಮತ್ತು ಮುಖ್ಯ ಅತಿಥಿಗಳಾಗಿ (ಮೈ ಲಾಯನ್) ಡಿಸ್ಟ್ರಿಕ್ಟ್ ಚೇರಪರ್ಸನ್ ಶಾಂತಾರಾಮ ನಾಯ್ಕ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿಟಿ ಲಯನ್ಸ್ ಅಧ್ಯಕ್ಷೆ ಜಯಶ್ರೀ ಪಿ.ಶೆಟ್ಟಿ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗುರು ನಾಯ್ಕ ವೇದಿಕೆಯಲ್ಲಿದ್ದರು.
    ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದ ಅವರು ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿ ಮಾತನಾಡಿದ ರಾಜೇಶ ಸಾಲಿಹಿತ್ತಲ ಅವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಂಕೋಲಾ ಲಯನ್ಸ್ ಸಿಟಿ ಕಾರ್ಯ ಪ್ರಶಂಸಿಸಿದರು.
    ಮುಖ್ಯ ಅತಿಥಿಗಳಾದ ಶಾಂತಾರಾಮ ನಾಯ್ಕ ಮಾತನಾಡಿ, ಲಯನ್ಸ್ನ ಸೇವೆ ಕಾರ್ಯ ಗ್ರಾಮೀಣ ಪ್ರದೇಶಗಳಿಗೂ ದೊರಕುತ್ತಿರುವುದು ಸಂತಸದ ವಿಷಯ. ಇದರ ಜೊತೆಗೆ ಮಕ್ಕಳ ಆರೋಗ್ಯ ಮತ್ತು ಪರಿಸರ ಪ್ರಜ್ಞೆ ಕುರಿತು ಒತ್ತು ನೀಡುವ ಕಾರ್ಯವಾಗಲಿ ಎಂದು ಆಶಿಸಿದರು.
    ಅವರ್ಸಾ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಮಾನಸಾ ಎಂ. ನಾಯ್ಕ ಮಾದರಿ ವಸ್ತು ಪ್ರದರ್ಶನ ಕೊಠಡಿ ಅನಾವರಣಗೊಳಿಸಿ ಮಕ್ಕಳ ಕ್ರಿಯಾಶೀಲತೆ, ಪ್ರಾವಿಣ್ಯತೆಯನ್ನು ಕೊಂಡಾಡಿದರು. ಲಯನ್ ಮಾಯಾ ಶೆಟ್ಟಿಯವರ ನೃತ್ಯ ಸಂಯೋಜನೆಯಲ್ಲಿ ರೂಪುಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ‘ಕೃಷ್ಣ ಸುಧಾಮ’ ಏಕಾಂಕಗಳು ಪ್ರೇಕ್ಷಕರ ಮನಸೂರೆಗೊಂಡವು.
    ಈ ಸಂದರ್ಭದಲ್ಲಿ ಹಾಜರಿದ್ದ ಶಾಲಾಭಿವೃದ್ಧಿ ಸಮಿತಿಯವರಿಗೆ, ಪಾಲ್ಗೊಂಡ ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರಿಗೆ ಶಶಿಧರ ಶೇಣ್ವಿ ‘ಮಧ್ಯಾಹ್ನದ ಔತಣ ಕೂಟ’ ಏರ್ಪಡಿಸಿದ್ದರು. ‘ಶ್ರೀ ಮಹಾಲಕ್ಷ್ಮಿ ಕೇಟರ‍್ಸ್’ ಮಠಾಕೇರಿ (ಅಂಕೋಲಾ) ವತಿಯಿಂದ ಶಾಲೆಯ ‘ಅಕ್ಷರ ದಾಸೋಹ’ ಯೋಜನೆಗಾಗಿ ಉಚಿತವಾಗಿ 20 ಕೆ.ಜಿ. ಉಪ್ಪಿನ ಕಾಯಿಯನ್ನು ಶಾಲಾ ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಲಾಯಿತು.
    ಅಂ ಕೋಲಾಸಿಟಿ ಲಯನ್ಸ್ ಕಾರ್ಯದರ್ಶಿ ಲಾ| ನಯನಾ ಶೇಟ್, ಕೋಶಾಧ್ಯಕ್ಷೆ ಲಾ| ನೀತಾ ಮಹಾಲೆಯವರೊಂದಿಗೆ ಭಾಗವಹಿಸಿದ ಮಕ್ಕಳೊಂದಿಗೆ ಬೆರೆತು ಶಾಲಾ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು ವಿಶೇಷವಾಗಿತ್ತು. ಶಾಲಾ ಮುಖ್ಯಾಧ್ಯಾಪಕಿ ನಿರ್ಮಲಾ ಬಿ. ಆಗೇರ, ಸಹಶಿಕ್ಷಕರಾದ ನಾಗರತ್ನ ಎಸ್. ನಾಯಕ, ಪುಷ್ಪಾ ಜಿ. ನಾಯಕ, ಭಾರತಿ ನಾಯಕ ಸಂಘಟನೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top