ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ವಿಭಿನ್ನ ಹಾಗೂ ವಿಶಿಷ್ಠ ಸಂಸ್ಥೆಯೆಂದೇ ಗುರುತಿಸಿಕೊಂಡಿರುವ ಇಲ್ಲಿಯ ಚೇತನಾ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯು 2022ನೇ ಸಾಲಿನಲ್ಲಿ 4,09,127 ರೂ. ಗಳಷ್ಟು ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ. ಎಮ್. ಹೆಗಡೆ, ಹುಳಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘವು ಇಲ್ಲಿಯ ಕೆನರಾ ಡಿ.ಸಿ.ಸಿ ಬ್ಯಾಂಕ್, ತಾಲೂಕಾ ಹುಟ್ಟುವಳಿ ಮಾರಾಟ ಸಂಘಗಳು, ಪ್ರಾಥಮಿಕ ಸಹಕಾರಿ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇರಿದಂತೆ ರೈತ ಸದಸ್ಯರಿಗೆ ತ್ವರಿತ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಮುದ್ರಣ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದು, ವರದಿ ಸಾಲಿನಲ್ಲಿ 67.93 ಲಕ್ಷ ರೂ.ಗಳ ಮುದ್ರಣ ಕೆಲಸವನ್ನು ಪೂರೈಸಿದೆ.
ಕಳೆದ 33 ವರ್ಷಗಳಿಂದ ಸಹಕಾರ ಕ್ಷೇತ್ರದ ಆಶೋತ್ತರಗಳಿಗೆ ಚ್ಯುತಿಬಾರದ ರೀತಿಯಲ್ಲಿ ಸಂಘವು ಮುನ್ನೆಡೆಯುತ್ತಿದೆ. ಸಂಘದ ಶೇರು ಬಂಡವಾಳ 2.28 ಲಕ್ಷ ರೂ. ಇದ್ದು, ಒಟ್ಟೂ ನಿಧಿಗಳು 119.40ಲಕ್ಷದಷ್ಟಿದೆ. 21-22 ನೇ ಸಾಲಿನ ಲಾಭಾಂಶದಲ್ಲಿ ಶೇ.15ರಷ್ಟು ಡಿವಿಡೆಂಡ್ ಮೊತ್ತವನ್ನು ಸದಸ್ಯರಿಗೆ ಹಂಚಲು ತೀರ್ಮಾನಿಸಲಾಗಿದೆ. ಜತೆಯಲ್ಲಿ ಸಪ್ಟೆಂಬರ್ 21ರ ಮಧ್ಯಾಹ್ನ 3.30ಕ್ಕೆ ಇಲ್ಲಿಯ ಟಿ.ಎಮ್.ಎಸ್. ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ಜರುಗಲಿದ್ದು ಸದಸ್ಯರು ಆಗಮಿಸಿ ಸಂಸ್ಥೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಪ್ರಕಟಣೆ ತಿಳಿಸಿದೆ.