Slide
Slide
Slide
previous arrow
next arrow

ಎಂ.ಇ.ಎಸ್. ಚುನಾವಣೆ; ಮುಳಖಂಡ ಮುಂದಾಳತ್ವಕ್ಕೆ ಗೆಲುವು

300x250 AD

ಶಿರಸಿ: ನಗರದ ಪ್ರತಿಷ್ಠಿತ ಮಾಡರ್ನ ಎಜ್ಯುಕೇಶನ್ ಸೊಸೈಟಿ ಆಡಳಿತ ಮಂಡಳಿಯ ದಾನಿ ಕ್ಷೇತ್ರದ ನಿರ್ದೇಶಕರ ಆಯ್ಕೆಯ ಚುನಾವಣೆಯು ಸೆ.18, ಭಾನುವಾರದಂದು ನಗರದ ಎಂಇಎಸ್ ವಾಣಿಜ್ಯ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು. ಉಳಿದಂತೆ ಆಡಳಿತ ವಿಭಾಗದ ಪೋಷಕ, ಸಂರಕ್ಷಕ, ಸಾಮಾನ್ಯ ವಿಭಾಗದ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಾನಿಗಳ ವಿಭಾಗದ 10 ಸ್ಥಾನಗಳಿಗೆ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಚುನಾವಣಾ ಫಲಿತಾಂಶದಂತೆ 267 ಮತ ಪಡೆದ ಶಿವಾನಂದ ವಿ. ಶಿವನಂಚಿ, 263 ಮತದಿಂದ ದೀಪಕ್ ಮೋಹನ್ ಭಟ್, 258 ಮತದಿಂದ ಹರೀಶ್ ಪಂಡಿತ್, 246 ಮತ ಪಡೆದ ಲಕ್ಷ್ಮಿನಾರಾಯಣ ರಾಮಚಂದ್ರ ಹೆಗಡೆ,246 ಮತದಿಂದ ಪ್ರಸಾದ್ ಭಟ್ ಹುಲೇಮಳಗಿ,243 ಮತ ಪಡೆದ ಎಸ್.ಕೆ. ಭಾಗ್ವತ್, 239 ಮತಗಳಿಂದ ಶ್ರೀಧರ ನಾಗೇಶ್ ಹೆಗಡೆ,‌231 ಮತದಿಂದ ದೀಪಕ್ ದೊಡ್ಡೂರು, ಹಾಗೂ ರಮೇಶ್ ನರಸಿಂಹ ಹೆಗಡೆ 229 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಎಂಇಎಸ್‌ 61ನೇ ವಾರ್ಷಿಕ ಸಭೆ: ಚುನಾವಣೆ ಬಳಿಕ ನಡೆದ ಎಂಇಎಸ್‌ 61ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ, ಕಳೆದ 61 ವರ್ಷಗಳಿಂದ ಎಂಇಎಸ್ ಸಂಸ್ಥೆ ಉತ್ತಮವಾಗಿ ನಡೆದುಕೊಂಡು ಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ 4800 ವಿದ್ಯಾರ್ಥಿಗಳು  ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಹೊಸ ಆಯಾಮ ನೀಡುತ್ತಿದೆ. ಈ ಹಿಂದೆ ಸಂಸ್ಥೆಯ ಮುಂದೆ ಸಾಕಷ್ಟು ಸವಾಲುಗಳಿದ್ದವು.ಎಲ್ಲ ಸವಾಲುಗಳನ್ನು ನಾವು ಎದುರಿಸಿಕೊಂಡು ಬಂದಿದ್ದೇವೆ.ಮುಂದಿನ ದಿನಗಳಲ್ಲೂ ಎಲ್ಲ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧರಿದ್ದೇವೆ ಎಂದರು.

300x250 AD

ಸಂಸ್ಥೆಯ ಸದಸ್ಯರಿಗೆ ಗುರುತಿನ ಚೀಟಿ ವ್ಯವಸ್ಥೆ ಜಾರಿ ಮಾಡಬೇಕು ಹಾಗೂ ಚುನಾವಣಾ ವಿಚಾರದಲ್ಲಿ ಆಗುವ ಗೊಂದಲಗಳು ಮುಂದಿನ ದಿನಗಳಲ್ಲಿ ಆಗಬಾರದು ಎಂದು ಸದಸ್ಯರು ಆಡಳಿತ ಮಂಡಳಿಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಶೆಟ್ಟಿ, ಉಪಾಧ್ಯಕ್ಷರಾದ ಭೀಮಣ್ಣ ನಾಯ್ಕ, ಹಾಲಪ್ಪ ಜಕಲಣ್ಣನವರ, ಗಣಪತಿ ಹೆಗಡೆ, ನಿತಿನ್ ಸುಬ್ಬರಾವ್ ಕಾಸರಕೋಡು, ಖಜಾಂಚಿ ಸುಧೀರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top